* ಸದ್ಯದಲ್ಲೇ ಸಿಗಲಿದೆ ಹೊಸ ಫೀಚರ್
ನವದೆಹಲಿ: ವಾಟ್ಸ್ ಆ್ಯಪ್ ನಲ್ಲಿ ಸ್ವೀಕರಿಸುವ ಹಾಗೂ ಕಳುಹಿಸುವ ಮೆಸೇಜ್ ಎಷ್ಟು ದಿನದಲ್ಲಿ ಡಿಲೀಟ್ ಆಗಬೇಕೆಂಬುದನ್ನು ಇನ್ಮುಂದೆ ನೀವೇ ನಿರ್ಧರಿಸಬಹುದು. ಸೆಲ್ಫ್ ಡಿಸ್ಟ್ರಕ್ಟಿಂಗ್ ಮೆಸೇಜ್ ಎಂಬ ಹೊಸ ಫೀಚರ್ ಅನ್ನು ಬಳಕೆದಾರರಿಗೆ ವಾಟ್ಸ್ಆ್ಯಪ್ ಸದ್ಯದಲ್ಲೇ ನೀಡಲಿದೆ. ಖಾಸಗಿತನವನ್ನು ಬಯಸುವವರಿಗೆ ಈ ಫೀಚರ್ ಸಹಕಾರಿಯಾಗಲಿದೆ.ಮೆಸೇಜ್ ಕಳುಹಿಸುವ ಮೊದಲು ಎಷ್ಟು ಸಮಯ ಇರಬೇಕು, ಯಾವಾಗ ಡಿಲಿಟ್ ಆಗಬೇಕು ಎಂಬುದನ್ನು ಮೊದಲೇ ಸೆಟ್ಟಿಂಗ್ಸ್ನಲ್ಲಿ ನಿರ್ಧರಿಸಬಹುದು. ಆ್ಯಂಡ್ರಾಯ್ಡ್ ಬಳಕೆದಾರರಿಗೇ ಈ ಸೌಲಭ್ಯ ಮೊದಲು ಸಿಗಲಿದೆ.