
ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ನಿವಾರಿಸಿ, ಕೇಂದ್ರ ವಲಯದ ಯೋಜನೆ ಜಾರಿಗೆ ತರಲು ಸರ್ಕಾರ 1151 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ ಎಂದು ಸರಕಾರ ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.
ರಾಜ್ಯಸಭೆಯಲ್ಲಿ ಪ್ರಶ್ನೊತ್ತರ ಸಮಯದಲ್ಲಿ ಈ ವಿಷಯ ತಿಳಿಸಿದ ಪಂಚಾಯತಿ ರಾಜ್, ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ಪರಶೋತ್ತಮ್ ರೂಪಾಲಾ, ವಾಯುಮಾಲಿನ್ಯ ತಡೆಯಲು ಮತ್ತು ಕೂಳೆ ಬೆಳೆಗಳನ್ನು ನಾಶಪಡಿಸಲು ಸ್ಥಳ ನಿರ್ವಹಣೆ ಮತ್ತು ಅಗತ್ಯವಾದ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡುವುದಾಗಿ ಸಚಿವರು ಹೇಳಿದರು.