ಭೋಪಾಲ್: ವಿಮಾನದಲ್ಲಿ ಸಿಬ್ಬಂದಿ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಆರೋಪಿಸಿದ್ದಾರೆ. ಈ ಸಂಬಂಧ ಭೋಪಾಲದಲ್ಲಿ ಅವರು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದಾರೆ. ವಿಮಾನದಲ್ಲಿ ಈ ಹಿಂದೆ ಖಾತರಿಪಡಿಸಲಾದ ಸೀಟ್ ನ್ನು ನನಗೆ ನೀಡಿಲ್ಲ. ಅಲ್ಲದೆ ವಿಮಾನದಲ್ಲಿ ಕೂಡ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ. ಖಾಸಗಿ ವಿಮಾನ ಯಾನ ಸಂಸ್ಥೆಯೊಂದರ ವಿರುದ್ಧ ಠಾಕೂರ್ ಈ ಗಂಭೀರ ಆರೋಪ ಮಾಡಿದ್ದಾರೆ