ಮುಂಬೈ: ಮಹಾರಾಷ್ಟ್ರದಲ್ಲಿ ರಚನೆಯಾದ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ನ ಮಹಾ ವಿಕಾಡ್ ಅಘಾಡಿ ಸರ್ಕಾರ ಶನಿವಾರ ವಿಶ್ವಾಸಮತ ಯಾಚನೆಯಲ್ಲಿ ಜಯ ಸಾಧಿಸಿದೆ ಇದೇ ವೇಳೆ ವಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಸಭಾತ್ಯಾಗ ಮಾಡಿದರು. ಕಾಂಗ್ರೆಸ್ ಶಾಸಕ ಅಶೋಕ್ ಚವಾಣ್ ವಿಶ್ವಾಸಮತದ ಪ್ರಸ್ತಾವನೆ ಮಂಡಿಸಿದರು. ಇದನ್ನು ಎನ್ಸಿಪಿಯ ನವಾಬ್ ಮಲಿಕ್ ಮತ್ತು ಶಿವಸೇನೆಯ ಸುನಿಲ್ ಪ್ರಭು ಅನುಮೋದಿಸಿದರು.ಗಡುವಿಗೂ ಮುನ್ನ ವಿಶ್ವಾಸಮತ ಯಾಚಿಸಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ 169 ಸದಸ್ಯ ಬಲವನ್ನು ಸಾಬೀತುಪಡಿಸಿತು.