ಹೈದರಾಬಾದ್: ವೃತ್ತಿಯಲ್ಲಿ ಪಿಕ್ ಪಾಕೆಟ್ ಪರಿಣಿತ, ತಿಂಗಳಿಗೆ ಮನೆ ಬಾಡಿಗೆ 30 ಸಾವಿರ ರೂಪಾಯಿ. ಇಬ್ಬರು ಮಕ್ಕಳು ಪ್ರತಿಷ್ಟಿತ ಶಾಲೆಯಲ್ಲಿ ಶಿಕ್ಷಣ. ವಾರ್ಷಿಕ ಫೀಸ್ ಇಬ್ಬರಿಗೆ ತಲಾ ಎರಡು ಲಕ್ಷ ರೂಪಾಯಿ. ಇದು ಪೊಲೀಸರು ಬಹಿರಂಗಪಡಿಸಿದ ಪಿಕ್ ಪಾಕೆಟ್ ಕಳ್ಳ ತಾನೇದಾರ್ ಸಿಂಗ್ ಕುಶ್ವನ ವಿಲಾಸಿ ಬದುಕಿನ ಚಿತ್ರಣ. ಸಿಕಂದರ್ ಬಾದ್ ರೈಲ್ವೇ ಪೊಲೀಸರು ಇದೀಗ ತಾನೇದಾರ್ ಸಿಂಗ್ ನನ್ನು ಬಂಧಿಸಿದ್ದಾರೆ. ಸಿಕಂದರ್ ಬಾದ್ ನಿಂದ ಹೊರಡುವ ದೂರ ರೈಲುಗಳ ಪ್ರಯಾಣಿಕರೇ ಇತನ ಟಾರ್ಗೆಟ್. 2004ರಿಂದಲೇ ಪಿಕ್ ಪಾಕೆಟ್ ಆರಂಭಿಸಿರುವ ತಾನೇದಾರ್ ಸಿಂಗ್, ಸುಮಾರು ಎರಡು ಕೋಟಿ ರೂಪಾಯಿ ಆಸ್ತಿ ಈ ಮೂಲಕ ಸಂಪಾದಿಸಿದ್ದಾನೆ.