ಶಬರಿಮಲೆ: ಮಕ್ಕರ ಜ್ಯೋತಿ ದರ್ಶನಕ್ಕೆ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಈ ಮಧ್ಯೆ ದಾಖಲೆ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಮಣಿಕಂಠನ ದರ್ಶನಕ್ಕೆ ಭಕ್ತರು 12 ಗಂಟೆ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತುಪ್ಪದ ಅಭಿಷೇಕ ಮಾಡಲು 24 ಗಂಟೆ ಕಾಯಬೇಕಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪ್ರತಿಭಟನೆ ಕಡಿಮೆಯಾಗಿದ್ದು, ಇದು ಭಕ್ತರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.