ತಿರುವನಂತಪುರಂ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಶಶಿ ತರೂರ್ ಗೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ತರೂರ್ ಅವರ ಇಂಗ್ಲೀಷ್ ಕೃತಿಗೆ ಪ್ರಶಸ್ತಿ ದೊರೆತಿದೆ. ಮಲೆಯಾಳಂನ ಖ್ಯಾತ ನಟ ಮೋಹನ್ ಲಾಲ್, ಚಿತ್ರ ನಿರ್ದೇಶಕ ಪ್ರಿಯದರ್ಶನ್ ಸೇರಿದಂತೆ ಹಲವು ಮಂದಿ ತರೂರ್ ಅವರನ್ನು ಅಭಿನಂದಿಸಿದ್ದಾರೆ. ಇಂಗ್ಲೀಷ್ ಭಾಷೆಯ ಮೇಲೆ ಅಸೂಯೆ ಹುಟ್ಟಿಸುವಷ್ಟು
ಹಿಡಿತ ಹೊಂದಿರುವ ತರೂರ್, ತಮ್ಮ ಹೊಸ ಹೊಸ ಪದಗಳಿಂದ ಟ್ವೀಟರ್ ನಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ.