Saturday, December 2, 2023

ಶಾಲೆಯಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಸಾವು- ರಾಷ್ಟ್ರೀಯ ಮಕ್ಕಳ ಆಯೋಗ ಗರಂ

Follow Us

ಕೇರಳದ ಸುಲ್ತಾನ್ ಬತ್ತೇರಿಯಲ್ಲಿ ತರಗತಿಯಲ್ಲಿ ವಿದ್ಯಾರ್ಥಿನಿ ಹಾವು ಕಚ್ಚಿ ಸಾವನ್ನಪ್ಪಿದ  ಪ್ರಕರಣ ಗಂಭೀರ ಸ್ವರೂಪ ಪಡೆದಿದೆ. ಈ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಮಕ್ಕಳ ಆಯೋಗ ಜಿಲ್ಲಾಧಿಕಾರಿಗೆ ಆದೇಶ ನೀಡಿದೆ.  ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಸರ್ಕಾರ, ಪ್ರಿನ್ಸಿಪಾಲ್ ಸೇರಿದಂತೆ ಇಬ್ಬರನ್ನು ಅಮಾನತು ಮಾಡಿದೆ. ಅಲ್ಲದೇ ಉನ್ನತ ಮಟ್ಟದ ತನಿಖೆಗೆ ಕೂಡ ಆದೇಶ ನೀಡಿದೆ. ಐದನೇ ತರಗತಿ ವಿದ್ಯಾರ್ಧಿನಿಯಾಗಿದ್ದ ಶಹೇಲ್ ಗೆ ತರಗತಿಯಲ್ಲೇ ಹಾವು ಕಚ್ಚಿದೆ ಎಂದು ಆರೋಪಿಸಲಾಗಿದೆ.  ಹಾವು ಕಚ್ಚಿದ್ದರೂ  ವಿದ್ಯಾರ್ಥಿನಿಯನ್ನು ಸಕಾಲಕ್ಕೆ  ಆಸ್ಪತ್ರೆಗೆ ದಾಖಲಿಸುವಲ್ಲಿ ಕೂಡ ಶಿಕ್ಷಕರು ವಿಫಲರಾಗಿದ್ದರು ಎಂಬ ಟೀಕೆ ಕೇಳಿ ಬಂದಿದೆ. ಇದೇ ವೇಳೆ ಘಟನೆ ಖಂಡಿಸಿ ಎಸ್ ಎಫ್ ಐ ಮತ್ತು ಕೆ ಎಸ್ ಯು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಖಾಸಗಿ ಡೇರಿಗಳ ಹಾಲು ಕಲಬೆರಕೆ, ವಿಷಕಾರಿ: FSSAI ವರದಿಯಲ್ಲಿ ಬಹಿರಂಗ

newsics.com ಬೆಂಗಳೂರು: ರಾಜ್ಯದ ಮಾರುಕಟ್ಟೆಗೆ ಪೂರೈಕೆಯಾಗುವ ಬಹುತೇಕ ಖಾಸಗಿ ಬ್ರ್ಯಾಂಡ್‌'ಗಳ ಹಾಲಿನಲ್ಲಿ ವಿಷಕಾರಿ ರಾಸಾಯನಿಕಗಳಿವೆ ಮತ್ತು ಆ ಹಾಲು ಕಲಬೆರಕೆಯಾಗಿದೆ ಎಂಬ ಸಂಗತಿ FSSAI ಪರೀಕ್ಷೆಯಲ್ಲಿ ದೃಢಪಟ್ಟಿದೆ. ಜತೆಗೆ,...

ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನಕ್ಕೆ ಅವಮಾನ: ಟ್ರಕ್‌’ಗೆ ತಾವೇ ಲಗೇಜ್‌ ಲೋಡ್‌ ಮಾಡಿದ ಆಟಗಾರರು

newsics.com ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸಕ್ಕೆ ತೆರಳಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ವಿಮಾನ ನಿಲ್ದಾಣದಲ್ಲಿ ತಮ್ಮ ಲಗೇಜ್ ಅನ್ನು ತಾವೇ ಟ್ರಕ್ ತುಂಬುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಪಾಕಿಸ್ತಾನದಿಂದ ತಂದಿರುವ ತಮ್ಮ ಕಿಟ್ ಗಳು...

ರಾಜ್ಯದ 36 ಲಕ್ಷ ಮತದಾರರಿಗೆ ಚುನಾವಣಾ ಆಯೋಗ ನೋಟಿಸ್

newsics.com ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರಿರುವ ಅಥವಾ ಹೆಸರು ನಕಲು ಮಾಡಿರುವ 36 ಲಕ್ಷ ಮತದಾರರಿಗೆ ರಾಜ್ಯ ಚುನಾವಣಾ ಆಯೋಗವು ಭಾರತೀಯ ಅಂಚೆ ಮೂಲಕ ನೋಟಿಸ್ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದೆ. ಹೆಚ್ಚುವರಿಯಾಗಿ, ಮುಂದಿನ...
- Advertisement -
error: Content is protected !!