ಹೈದರಾಬಾದ್: ಮೆಹಬೂಬ್ ನಗರ ಪೊಲೀಸರು ಕೊಲೆಗಡುಕನೊಬ್ಬನನ್ನು ಬಂಧಿಸಿದ್ದು, ಸರಣಿ ಹತ್ಯೆಯ ಹಿಂದಿರುವ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. ಆರೋಪಿ ಯೆರುಕಾಲಿ ಶ್ರೀನು 15 ಹತ್ಯೆಗಳನ್ನು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಶೇಂದಿ ಅಂಗಡಿಯಲ್ಲಿ ಒಬ್ಬಂಟಿಯಾಗಿ ಶೇಂದಿ ಕುಡಿಯುವ ಮಹಿಳೆಯರನ್ನೇ ಈತ ಟಾರ್ಗೇಟ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಮೊದಲಿಗೆ ಮಹಿಳೆಗೆ ಶೇಂದಿ ಕುಡಿಸಿ ಬಳಿಕ ತನ್ನ ಬೈಕ್ ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯುತ್ತಿದ್ದ. ಬಳಿಕ ಮಹಿಳೆಯ ಬಳಿ ಇದ್ದ ಚಿನ್ನ ಮತ್ತು ನಗದನ್ನು ಅಪಹರಿಸುತ್ತಿದ್ದ. ಆಕೆ ಪ್ರತಿರೋಧ ತೋರಿಸಿದರೆ ಕೊಂದು ಬಿಡುತ್ತಿದ್ದ ಎಂದು ಮೆಹಬೂಬ್ ನಗರ ಎಸ್. ಪಿ. ರೇಮ ರಾಜೇಶ್ವರಿ ತಿಳಿಸಿದ್ದಾರೆ.