
ನವದೆಹಲಿ: ದೇಶದ ಗ್ರಾಮೀಣ ಪ್ರದೇಶಗಳ ಪರಿಸ್ಥಿತಿ ಹಾಗಿರಲಿ, ನಗರ ಪ್ರದೇಶಗಳಲ್ಲಿ ಶೇ. 15ರಷ್ಟು ಬಾಲಕಿಯರು ಅಪ್ರಾಪ್ತ ವಯಸ್ಸಿನಲ್ಲೇ ಶಾಲೆ ತೊರೆದು ವಿವಾಹ ಬಂಧನಕ್ಕೊಳಗಾಗುತ್ತಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ.
ನಗರ ಪ್ರದೇಶದಲ್ಲಿ ಪ್ರತಿ ಐದು ಬಾಲಕಿಯರಲ್ಲೊಬ್ಬರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇದರ ಪ್ರಮಾಣ ಮೂರರಲ್ಲಿ ಒಬ್ಬರಷ್ಟಿದೆ. ಇದರಿಂದ ಒಟ್ಟಾರೆಯಾಗಿ ದೇಶದ ಶೇ. 40ರಷ್ಟು ಮಕ್ಕಳು ಅನಕ್ಷರಸ್ತರಾಗಿ ಉಳಿಯುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.