ನವದೆಹಲಿ: ಭಾರತದಲ್ಲಿ ಆಶ್ರಯಪಡೆದಿರುವ ತಮಿಳು ನಿರಾಶ್ರಿತರಿಗೂ ಪೌರತ್ವ ನೀಡಬೇಕೇಂದು ರವಿಶಂಕರ್ ಗುರೂಜಿ ಮನವಿ ಮಾಡಿದ್ದಾರೆ. ಕಳೆದ 35 ವರ್ಷಗಳಿಂದ ಶ್ರೀಲಂಕಾದಿಂದ ಬಂದ ತಮಿಳು ನಿರಾಶ್ರಿತರು ತಮಿಳುನಾಡಿನಲ್ಲಿ ನೆಲೆಸಿದ್ದಾರೆ. ಕೇಂದ್ರ ಸರ್ಕಾರ ಇವರಿಗೂ ಪೌರತ್ವ ನೀಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ರವಿಶಂಕರ್ ಗುರೂಜಿ ಮನವಿ ಮಾಡಿದ್ದಾರೆ. ಟ್ವಿಟರ್ ನಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.