ನವದೆಹಲಿ; ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಜಾಮೀನು ಪಡೆದು ಬುಧವಾರವಷ್ಟೇ ಹೊರಬಂದಿರುವ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಗುರುವಾರ ಹಾಜರಾಗಿದ್ದಾರೆ .
ಸದನಕ್ಕೆ ಬರುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಸತ್ತಿನಲ್ಲಿ ನನ್ನ ಧ್ವನಿಯನ್ನು ಸರ್ಕಾರ ಅಡಗಿಸಲು ಸಾಧ್ಯವಿಲ್ಲ’ ಎಂದಿದ್ದಾರೆ. 2007 ರಲ್ಲಿ ಹಣಕಾಸು ಸಚಿವರಾಗಿದ್ದಾಗ ಐಎನ್‌ಎಕ್ಸ್ ಮೀಡಿಯಾ ಗ್ರೂಪ್ ವಿದೇಶಿ ಹಣವನ್ನು ಸ್ವೀಕರಿಸಲು ಅವಕಾಶ ಮಾಡಿಕೊಟ್ಟು ಅಕ್ರಮ ಎಸಗಿದ್ದಾರೆಂದು ಆರೋಪಿಸಿ ಆಗಸ್ಟ್ 21 ರಂದು ಸಿಬಿಐ ಬಂಧಿಸಿದ ನಂತರ ಚಿದಂಬರಂ ಅವರನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಮೂರು ತಿಂಗಳ ಕಾಲ ಇರಿಸಲಾಗಿತ್ತು.
ಸಂಸತ್ ಅಧಿವೇಶನಕ್ಕೆ ಚಿದಂಬರಂ ಹಾಜರ್!
Follow Us