ರಾಯ್ಪುರ: ಸಹೋದ್ಯೋಗಿ ನಡೆಸಿದ ಗುಂಡಿನ ದಾಳಿಯಲ್ಲಿ ಆರು ಐಟಿಬಿಪಿ (ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್) ಯೋಧರು ಸಾವನ್ನಪ್ಪಿರುವ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.
ಛತ್ತೀಸ್ ಘಡದ ನಾರಾಯಣಪುರ ಜಿಲ್ಲೆಯ ಐಟಿಬಿಪಿಯ 45 ನೇ ಬೆಟಾಲಿಯನ್ನ ಕಡೇನಾರ್ ಶಿಬಿರದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿಯ ಗುಂಡೇಟಿಗೆ ಐಟಿಬಿಪಿಯ 45 ನೇ ಬೆಟಾಲಿಯನ್ನ ಕಡೇನಾರ್ ಶಿಬಿರದ 6 ಮಂದಿ ಬಲಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ.
ರಾಜ್ಯ ರಾಜಧಾನಿ ರಾಯ್ಪುರದಿಂದ 350 ಕಿ.ಮೀ ದೂರದಲ್ಲಿರುವ ನಾರಾಯಣಪುರ ಜಿಲ್ಲೆಯ ಐಟಿಬಿಪಿ ಶಿಬಿರದಲ್ಲಿ ಈ ಘಟನೆ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಸೈನಿಕರನ್ನು ಹೆಲಿಕಾಪ್ಟರ್ ಮೂಲಕ ರಾಯಪುರಕ್ಕೆ ಕರೆತರಲಾಗಿದೆ. ಆದರೆ ಈ ಘಟನೆಗೆ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ರಜೆ ನೀಡದ ಕಾರಣ ಆತ ಆಕ್ರೋಶಗೊಂಡಿದ್ದ ಎನ್ನಲಾಗಿದೆ.