Friday, July 1, 2022

ಸಾಯಿಬಾಬಾ ದರ್ಶನಕ್ಕೆ ಅವಕಾಶ ಕಲ್ಪಿಸಿದ ಆಡಳಿತ ಮಂಡಳಿ

Follow Us

ಶಿರಡಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಶಿರಡಿ ಸಾಯಿಬಾಬಾ ದರ್ಶನ ರದ್ದು ನಿರ್ಧಾರವನ್ನು ದೇಗುಲದ ಆಡಳಿತ ಮಂಡಳಿ ಹಿಂಪಡೆದಿದೆ.
ದೂರದಿಂದ ಬರುವ ಭಕ್ತರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ದೇಗುಲ ಬಂದ್ ನಿರ್ಧಾರವನ್ನು ಹಿಂಪಡೆದಿರುವುದಾಗಿ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಈ ಬಗ್ಗೆ ದೇವಸ್ಥಾನ ಎಂದು ಶಿರಡಿ ಸಾಯಿ ದೇಗುಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್ ಮುಗ್ಲಿಕರ್, ಭಕ್ತರ ಅನುಕೂಲಕ್ಕಾಗಿ ದರ್ಶನ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಬಂದ್:

ಅದರೆ, ಮುಖ್ಯಮಂತ್ರಿಯವರ ನಡೆ, ಹೇಳಿಕೆ ವಿರೋಧಿಸಿ ಶಿರಡಿ ಪಟ್ಟಣದಲ್ಲಿ ಸ್ಥಳೀಯರು ಭಾನುವಾರ ಬಂದ್ ಆಚರಿಸುತ್ತಿದ್ದಾರೆ.

ಶಿರಡಿ ಗ್ರಾಮಸ್ಥರು ಸ್ಥಳೀಯ ಜನಪ್ರತಿನಿಧಿ ಬಿಜೆಪಿಯ ರಾಧಾಕೃಷ್ಣ ವಿಖೆ ಪಾಟೀಲ್ ನೇತೃತ್ವದಲ್ಲಿ ಶನಿವಾರ ಸಭೆ ನಡೆಸಿ, ಭಾನುವಾರ (ಜ‌.19) ಬಂದ್ ಘೋಷಿಸಿದ್ದಾರೆ. ವಿವಾದ ಬಗೆಹರಿಸಲು ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಠಾಕ್ರೆ ಭರವಸೆ ನಡುವೆಯೂ ಭಾನುವಾರ ಪ್ರತಿಭಟನಾರ್ಥವಾಗಿ ಬಂದ್ ಆಚರಿಸಲ್ಪಟ್ಟಿದ್ದು, ಖಾಸಗಿ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.

ಸಿಎಂ ಜತೆ ನಾಳೆ ಸಭೆ:

ವಿವಾದಕ್ಕೆ ಸಂಬಂಧಿಸಿದ ಸಿಎಂ ಉದ್ಧವ್ ಠಾಕ್ರೆ ಸೋಮವಾರ (ಜ.20) ತಮ್ಮ ಸಚಿವಾಲಯದಲ್ಲಿ ಸಭೆ ಕರೆದಿದ್ದಾರೆ. ಸ್ಥಳೀಯ ಪ್ರಮುಖರನ್ನೂ ಸಭೆಗೆ ಆಹ್ವಾನಿಸಿದ್ದಾರೆ. ಪಥ್ರಿಯ ಜನಪ್ರತಿನಿಧಿಗಳ ಜತೆಗೆ ಪ್ರತ್ಯೇಕ ಸಭೆಯನ್ನೂ ಮುಖ್ಯಮಂತ್ರಿ ನಡೆಸಲಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಹೊಸದಾಗಿ 17,070 ಕೊರೋನಾ ಸೋಂಕು ಪ್ರಕರಣ, 23 ಜನರ ಸಾವು

newsics.com ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 17,070 ಕೊರೋನಾ ಪ್ರಕರಣ ವರದಿಯಾಗಿದೆ. ಕೊರೋನಾ ಸೋಂಕಿತರಾಗಿದ್ದ...

ವಾಣಿಜ್ಯ ಬಳಕೆಯ ಸಿಲಿಂಡರ್ ದರ 198 ರೂಪಾಯಿ ಇಳಿಕೆ

newsics.com ನವದೆಹಲಿ: ಹೋಟೆಲ್ ಮಾಲಿಕರಿಗೆ ಸಿಹಿ ಸುದ್ದಿ. ಇದು ಬಳಕೆದಾರರಿಗೂ ಸ್ವೀಟ್  ನ್ಯೂಸ್. ವಾಣಿಜ್ಯ ಬಳಕೆಯ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಇಳಿಕೆಯಾಗಿದೆ. ತೈಲ ಸಂಸ್ಥೆಗಳು 198 ರೂಪಾಯಿ ಕಡಿತ ಮಾಡಿವೆ. ಇಂದಿನಿಂದ...

ಶನಿವಾರ ಏಕನಾಥ್ ಶಿಂಧೆ ವಿಶ್ವಾಸ ಮತ ಯಾಚನೆ

newsics.com ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶನಿವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಲಿದ್ದಾರೆ. ಬಿಜೆಪಿ ಬೆಂಬಲಪಡೆದು ಏಕನಾಥ್ ಶಿಂಧೆ ಸರ್ಕಾರ ರಚಿಸಿದ್ದಾರೆ. ಶಿಂಧೆ ಬಣದಲ್ಲಿ 40ಕ್ಕೂ ಹೆಚ್ಚು ಶಾಸಕರು ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ...
- Advertisement -
error: Content is protected !!