ಭೋಪಾಲ್: ’ವೀರ್ ಸಾವರ್ಕರ್ ಕಿತ್ನೆ ವೀರ್.. ?’ ಶೀರ್ಷಿಕೆಯಡಿ ಕಾಂಗ್ರೆಸ್ ಪಕ್ಷದ ಸೇವಾದಳ ವಿಭಾಗ ಪ್ರಕಟಿಸಿರುವ ಕಿರುಹೊತ್ತಿಗೆಯನ್ನು ಕೂಡಲೇ ನಿಷೇಧಿಸಬೇಕು ಎಂದು ವಿನಾಯಕ ದಾಮೋದರ್ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಶುಕ್ರವಾರ ಮಧ್ಯಪ್ರದೇಶ ಸರ್ಕಾರವನ್ನು ಒತ್ತಾಯಿಸಿದರು.
ಹಿಂದೂ ಮಹಾಸಭಾದ ಸಹ ಸಂಸ್ಥಾಪಕರಾಗಿದ್ದ ವಿನಾಯಕ್ ದಾಮೋದರ್ ಸಾವರ್ಕರ್ , ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯೊಂದಿಗೆ ’ದೈಹಿಕ ಸಂಬಂಧ’ ಹೊಂದಿದ್ದರು ಎಂದು ಕಿರುಹೊತ್ತಿಗೆಯಲ್ಲಿ ಹೇಳಲಾಗಿದೆ. ಇದಕ್ಕೆ ರಂಜಿತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾವರ್ಕರ್ ಕಿರುಹೊತ್ತಿಗೆ ನಿಷೇಧಿಸಿ: ರಂಜಿತ್ ಸಾವರ್ಕರ್
Follow Us