ಕೋಲ್ಕತಾ: ಸಿಎಎ ವಿರುದ್ಧ ಹೋರಾಟದಲ್ಲಿ ಒಟ್ಟು 80 ಕೋಟಿ ರೂ. ಮೌಲ್ಯದ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗಿದ್ದು, ಅದನ್ನು ಪ್ರತಿಭಟನಾಕಾರರಿಂದ ಭರಿಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.
ಇಲ್ಲಿಯವರೆಗೆ ಸುಮಾರು 28 ಜನರಿಗೆ 14.86 ಲಕ್ಷ ರೂ. ಪಾವತಿಸುವಂತೆ ಸೂಚಿಸಲಾಗಿದೆ. ರೈಲ್ವೆ ಇಲಾಖೆ ಒಟ್ಟಾರೆಯಾಗಿ 80 ಲಕ್ಷ ನಷ್ಟವಾಗಿದ್ದು, ಈಶಾನ್ಯ ರೈಲ್ವೆ ಇಲಾಖೆಗೆ 10 ಕೋಟಿ ರೂ. ನಷ್ಟವಾಗಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.