ನವದೆಹಲಿ: ದೆಹಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ವಿಡಿಯೋ ಒಂದಕ್ಕೆ ಲೈಕ್ ಮಾಡಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರಿ ಟೀಕೆಗೆ ಗುರಿಯಾಗಿದ್ದರು.
ಈ ಕುರಿತು ಸೋಮವಾರ ಸ್ಪಷ್ಟೀಕರಣ ನೀಡಿರುವ
ಅಕ್ಷಯ್, ಅದೂ ಕಣ್ತಪ್ಪಿನಿಂದ ನೀಡಿದ ಲೈಕ್ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಜಾಮಿಯಾ ಮಿಲಿಯಾ
ವಿದ್ಯಾರ್ಥಿಗಳ ಟ್ವೀಟ್ ಗೆ ಲೈಕ್ ಮಾಡಿರುವುದು ಕಣ್ತಪ್ಪಿನಿಂದ. ನಾನು ಟ್ವೀಟ್ ಗಳನ್ನು ನೋಡುತ್ತಿದ್ದಾಗ
ತಪ್ಪಿ ಲೈಕ್ ಬಟನ್ ಒತ್ತಿದ್ದು, ತಕ್ಷಣ ಅದನ್ನು ಅನ್ ಲೈಕ್ ಮಾಡಿದ್ದೇನೆ. ನಾನು ಇಂತಹ
ಕೃತ್ಯಗಳನ್ನು ಬೆಂಬಲಿಸುವುದು ಸಾಧ್ಯವೇ ಇಲ್ಲ’ ಎಂದಿದ್ದಾರೆ.