ಮುಂಬೈ: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ, ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಿದ ಮಧ್ಯಪ್ರದೇಶದ ಬಿಎಸ್ ಪಿ ಶಾಸಕ ರಮಾಬಾಯ್ ಪರಿಹಾರ್ ಎಂಬುವರನ್ನು ಅಮಾನತುಗೊಳಿಸಿದ್ದಾರೆ.
ರಮಾಬಾಯ್ ಅವರು, ‘ಸಿಎಎ ಅನ್ನು ಸಲೀಸಾಗಿ ಜಾರಿಗೊಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಅಭಿನಂದಿಸುತ್ತೇವೆ. ಇದು ಬಹಳ ಹಿಂದೆಯೇ ಜಾರಿಯಾಗಬೇಕಿದ್ದ ನೀತಿ ’ ಎಂದಿದ್ದರು.