ನವದೆಹಲಿ; ದೇಶಾದ್ಯಂತ ತೀವ್ರಗೊಂಡಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗೆ ಬಿಜೆಪಿಯೇ ಕಾರಣ ಎಂದಿರುವ ಶಿವಸೇನಾ ನಾಯಕ ಹಾಗೂ ಸಂಸದ ಸಂಜಯ್ ರಾವತ್, ಅಮೆರಿಕದ ಹಿರಿಯ ನಾಯಕ ದಿ. ಮಾರ್ಟಿನ್ ಲೂಥರ್ ಕಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ಧಾರೆ.
‘ರಾಜಕೀಯ ಧಾರ್ಮಿಕ ವಿವಾದಗಳನ್ನು ಸೃಷ್ಟಿಸಿದರೆ, ಆ ದೇಶ ತಪ್ಪು ಜನರ ಕೈಯಲ್ಲಿದೆ ಎಂಬುದನ್ನು ಅರಿಯಬೇಕು’ ಎಂದು ಮಾರ್ಟೀನ್ ಲೂಥರ್ ಹೇಳಿಕೆ ನೀಡಿದ್ದರು. ಅದು ಇಲ್ಲಿನ ಸನ್ನಿವೇಶಕ್ಕೆ ಹೋಲಿಕೆಯಾಗುತ್ತಿದೆ ಎಂದು ರಾವತ್ ಹೇಳಿದ್ದಾರೆ.