ನವದೆಹಲಿ: ಹೊಸ ಪೌರತ್ವ ಕಾನೂನಿಗೆ ಬೆಂಬಲಕ್ಕಾಗಿ ಬಿಜೆಪಿ ಮಿಸ್ಡ್ ಕಾಲ್ಡ್ ಅಭಿಯಾನ ಆರಂಭಿಸಿದ್ದು, ಟೋಲ್ ಫ್ರೀ ಸಂಖ್ಯೆ ಬಿಡುಗಡೆಗೊಳಿಸಿದೆ.
ಇದನ್ನು ಬಿಡುಗಡೆಗೊಳಿಸಿದ ಗೃಹ ಸಚಿವ ಅಮಿತ್ ಶಾ, ಹೊಸ ಪೌರತ್ವ ಕಾನೂನಿನಿಂದ ಒಂದು ಇಂಚೂ ಹಿಂದೆ ಸರಿಯುವುದಿಲ್ಲ. ಸರ್ಕಾರ ಹೊಸ ಪೌರತ್ವ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಕಾಯ್ದೆ ಬೆಂಬಲಿಸಲು 8866288662ಕ್ಕೆ ಮಿಸ್ ಕಾಲ್ ನೀಡುವಂತೆ ಅಮಿತ್ ಶಾ ಮನವಿ ಮಾಡಿದ್ದಾರೆ.