ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ, ಕಾಯ್ದೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ಸಿಎಎ ವಿರುದ್ಧದ ಪ್ರತಿಭಟನಾ ರಾಜಕೀಯಪ್ರೇರಿತವಾಗಿದ್ದು, ಹಿಂದೂ – ಮುಸ್ಲಿಮರ ವಿರುದ್ಧ ದ್ವೇಷ ತಂದಿಡಲು ಪ್ರಯತ್ನಿಸುತ್ತಿವೆ. ದೇಶದ ಕೇವಲ ನಾಲ್ಕು ವಿವಿಗಳಲ್ಲಿ ಮಾತ್ರ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇದು ಅವರ ಹಿಂದಿರುವ ಕೈಗಳನ್ನು ಸೂಚಿಸುತ್ತದೆ ಎಂದಿದ್ದಾರೆ.