Monday, October 2, 2023

ಸಿಗುತ್ತಿದೆ ಈರುಳ್ಳಿ ಸಾಲ!

Follow Us

ವಾರಾಣಸಿ: ಈಗ ಈರುಳ್ಳಿಗೂ ಸಾಲ ಸಿಗುತ್ತದೆ! ಈಗ ಇದೊಂದು ಬಗೆಯ ಆಂದೋಲನವಾಗಿಯೂ ರೂಪುಗೊಳ್ಳುತ್ತಿದೆ.
ಹೌದು, ವಾರಾಣಸಿಯ ಕೆಲವು ಅಂಗಡಿಗಳಲ್ಲಿ ಈರುಳ್ಳಿಯನ್ನು ಸಾಲ ಕೊಡಲಾಗುತ್ತದೆ. ಆದರೆ, ಅದಕ್ಕೆ ಪ್ರತಿಯಾಗಿ ಆಧಾರ್ ಕಾರ್ಡ್​ ಅಥವಾ ಬೆಳ್ಳಿ ಆಭರಣಗಳನ್ನು ಅಡ ಇಡಬೇಕು!
ಇದೆಲ್ಲ ಈರುಳ್ಳಿ ಬೆಲೆ ಗಗನಕ್ಕೇರಿರುವುದರ ಪರಿಣಾಮ. ಗ್ರಾಹಕರು ಈರುಳ್ಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಅನೇಕ ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಈರುಳ್ಳಿ ಬಳಕೆಯನ್ನು ಕಡಿಮೆ ಮಾಡಲಾಗಿದೆ. ಈರುಳ್ಳಿಯ ಬೆಲೆ ಏರಿಕೆಯಾಗಿರುವುದು ಒಂದೆಡೆಯಾದರೆ ಇನ್ನು ಕೆಲವೆಡೆ ಈರುಳ್ಳಿ ಖರೀದಿಸಲು ಸಿದ್ಧರಿದ್ದರೂ ಉತ್ತಮ ಈರುಳ್ಳಿ ಸಿಗದ ಪರಿಸ್ಥಿತಿ ಇದೆ.
ಈ ಹಿನ್ನೆಲೆಯಲ್ಲೇ ವಾರಾಣಸಿಯ ಕೆಲ ಅಂಗಡಿಗಳಲ್ಲಿ ಸಾಲ ರೂಪದಲ್ಲಿ ಈರುಳ್ಳಿ ನೀಡುವ ಮಾರ್ಗ ಕಂಡುಕೊಳ್ಳಲಾಗಿದೆ. ಈರುಳ್ಳಿಯನ್ನು ಸಾಲ ನೀಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲು ವಾರಾಣಸಿ ಜನರು ಮುಂದಾಗಿದ್ದಾರೆ. ಇದಕ್ಕೆ ಸಮಾಜವಾದಿ ಪಕ್ಷದ ಯುವಘಟಕದ ಕಾರ್ಯಕರ್ತರು ಜತೆಯಾಗಿದ್ದಾರೆ. ಸಮಾಜವಾದಿ ಪಕ್ಷದ ಕಾರ್ಯಕರ್ತರಿಂದ ನಡೆಸಲ್ಪಡುವ ಅಂಗಡಿಗಳಲ್ಲಿ ಬೆಳ್ಳಿ ವಸ್ತುಗಳು ಅಥವಾ ಆಧಾರ್​ ಕಾರ್ಡ್​ ಅನ್ನು ಒತ್ತೆಯಾಗಿಟ್ಟುಕೊಂಡು ಈರುಳ್ಳಿಯ ಸಾಲ ನೀಡಲಾಗುತ್ತಿದೆ.

ಮತ್ತಷ್ಟು ಸುದ್ದಿಗಳು

vertical

Latest News

ವಿದ್ಯುತ್ ಲೈನ್ ತಗುಲಿ 5 ಜಾನುವಾರು ಸ್ಥಳದಲ್ಲಿಯೇ ಸಾವು

newsics.com ಕೊಡಗು: ವಿದ್ಯುತ್ ಲೈನ್ ತುಂಡಾಗಿ ಬಿದ್ದ ಹಿನ್ನೆಲೆ ಐದು ಜಾನುವಾರುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ದಾರುಣ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮತ್ತೂರಿನಲ್ಲಿ ನಡೆದಿದೆ. ಮತ್ತೂರು ಗ್ರಾಮದ...

Asian Games; ಭಾರತಕ್ಕೆ ಒಂದೇ ದಿನ 15 ಪದಕ

newsics.com ಹ್ಯಾಂಗ್‌ಝೌ: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 8ನೇ ದಿನವಾದ ಭಾನುವಾರ ಒಂದೇ ದಿನ 15 ಪದಕ ಬಾಚಿಕೊಂಡಿದೆ. 7ನೇ ದಿನವಾದ ಶನಿವಾರ 10 ಚಿನ್ನ, 14 ಬೆಳ್ಳಿ ಮತ್ತು 14 ಕಂಚಿನೊಂದಿಗೆ 38 ಪದಕಗಳನ್ನು ಭಾರತ...

ಬೆಂಗಳೂರು ಕಂಬಳ: ಕೋಣಗಳಿಗೆ ಮಂಗಳೂರಿಂದಲೇ ಬರುತ್ತೆ ಕುಡಿಯುವ ನೀರು!

newsics.com ಬೆಂಗಳೂರು: ನವೆಂಬರ್ ತಿಂಗಳ 25 ಮತ್ತು 26ನೇ ತಾರೀಕಿನಂದು ಮೊದಲ ಬಾರಿಗೆ ತುಳುನಾಡಿನ ಗಡಿಯನ್ನು ದಾಟಿ ಬೆಂಗಳೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳ ನಡೆಯುತ್ತಿದೆ. ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈ ನೇತೃತ್ವದಲ್ಲಿ ಕಂಬಳ...
- Advertisement -
error: Content is protected !!