ನವದೆಹಲಿ; ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂರ್ಯನ ಕುರಿತು ಅಧ್ಯಯನ ನಡೆಸುವ ‘ಆದಿತ್ಯ’ ಎಂಬ ಉಪಗ್ರಹವನ್ನು ಉಡಾವಣೆಗೊಳಿಸಲು ಚಿಂತನೆ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ಮಾಸಿಕ ‘ಮನದ ಮಾತು’ ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಗನಯಾನದಲ್ಲಿ ಭಾರತ ಸಾಕಷ್ಟು ಸುಧಾರಣೆ ಕಂಡಿತು. ಇಸ್ರೋ ಶೀಘ್ರದಲ್ಲೇ ತನ್ನ ಖಗೋಳ ವಿಜ್ಞಾನದ ಉಪಗ್ರಹ ಆಸ್ಟ್ರೋಸ್ಯಾಟ್ ನೆರವಿನಿಂದ ಸೂರ್ಯನನ್ನು ಅಧ್ಯಯನ ಮಾಡುವ ಆದಿತ್ಯ ಎಂಬ ಉಪಗ್ರಹವನ್ನು ಉಡಾವಣೆ ಮಾಡಲು ಚಿಂತನೆ ನಡೆಸಿದೆ ಎಂದಿದ್ದಾರೆ.