ಭೋಪಾಲ್: ಹನಿಟ್ರ್ಯಾಪ್ ಮೂಲಕ ಮಧ್ಯಪ್ರದೇಶ ಪೊಲೀಸರು ಮೋಸ್ಟ್ ವಾಂಟೆಡ್ ಕ್ರಿಮಿನಲ್ನನ್ನು ಶನಿವಾರ ಬಂಧಿಸಿದ್ದಾರೆ. ಕೊಲೆ ಸೇರಿ 16 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಾಲಕೃಷ್ಣ ಚೌಧರಿ ಬಂಧಿತ ಆರೋಪಿ. ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಚೌಧರಿ ಕಳೆದ ಆಗಸ್ಟ್ನಲ್ಲಿ ಮಧ್ಯಪ್ರದೇಶದ ನೌಗಾನ್ ಪ್ರಾಂತ್ಯದಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಚೌಧರಿ ಮದುವೆ ವಿಚಾರ ತಿಳಿದ ಪೊಲೀಸರು ಮಹಿಳೆ ಹೆಸರಿನಲ್ಲಿ ಸಿಮ್ ಖರೀದಿಸಿ ಮಹಿಳಾ ಎಸ್ ಐ ಒಬ್ಬರಿಂದ ಕಾಲ್ ಮಾಡಿಸಿ ಆರೋಪಿ ಚೌಧರಿ ಜತೆ ಮಾತನಾಡಿಸಿದ್ದಾರೆ. ಬುಂದೇಲ್ ಖಂಡದ ಮಹಿಳೆ ಎಂದು ಪರಿಚಯಿಸಿಕೊಂಡ ಎಸ್ ಐ ತಕ್ಷಣ ಕಾಲ್ ಕಟ್ ಮಾಡಿದ್ದಾರೆ. ಆದರೆ ಚೌಧರಿ ಅದೇ ನಂಬರ್ ಗೆ ಕಾಲ್ ಮಾಡಿ ಹುಡುಗಿಯ ಸ್ನೇಹ ಸಂಪಾದಿಸಲು ಯತ್ನಿಸಿದ್ದು, ಎಸ್ ಐ ರೂಪದ ಹುಡುಗಿ ಮಾಡುವೆ ಪ್ರಸ್ತಾಪ ಇಟ್ಟಿದ್ದಾಳೆ. ಇದಕ್ಕೆ ಒಪ್ಪಿದ ಚೌಧರಿ ಬಿಜೌರಿಹಳ್ಳಿಯ ದೇವಸ್ಥಾನದಲ್ಲಿ ಭೇಟಿಯಾಗುವುದಾಗಿ ತಿಳಿಸಿದ್ದಾನೆ. ಮಫ್ತಿ ಪೊಲೀಸರೊಂದಿಗೆ ತೆರಳಿದ ಮಹಿಳಾ ಸಬ್ಇನ್ಸ್ಪೆಕ್ಟರ್, ಆರೋಪಿ ಚೌಧರಿ ದೇವಸ್ಥಾನದಲ್ಲಿ ಬಂಧಿಸಿದ್ದಾರೆ.