
ಚಂಡಿಗಢ: ದಲಿತ ವ್ಯಕ್ತಿ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ಮಾಡಿ, ಒತ್ತಾಯಪೂರ್ವಕವಾಗಿ ಮೂತ್ರ ಕುಡಿಸಿರುವ ಘಟನೆ ಪಂಜಾಬ್ನ ಸಂಗೂರ್ ನಲ್ಲಿ ನಡೆದಿದ್ದು, ತೀವ್ರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಹಲ್ಲೆಗೊಳಗಾದ 37 ವರ್ಷದ ವ್ಯಕ್ತಿಯನ್ನು ಇಲ್ಲಿ ಪಿಜಿಐಎಂಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು,ಆತನ ಕಾಲುಗಳ ಮೂಳೆ ಮುರಿದಿತ್ತು ಎಂದು ಎಸ್ಪಿ ಸಂದೀಪ್ ಗಾರ್ಗ್ ತಿಳಿಸಿದ್ದಾರೆ.
ಇಲ್ಲಿನ ಚಂಗಲಿವಾಲಾ ಗ್ರಾಮದ ನಿವಾಸಿಯಾಗಿರುವ ದಲಿತ ವ್ಯಕ್ತಿ, ಗ್ರಾಮದ ರಿಂಗು ಎಂಬ ವ್ಯಕ್ತಿ ಹಾಗೂ ಇತರರೊಂದಿಗೆ ವಾಗ್ವಾದ ನಡೆಸಿದ್ದ. ಈ ಗಲಾಟೆ ಗ್ರಾಮಸ್ಥರ ಮಧ್ಯಸ್ಥಿಕೆಯಿಂದ ಅಂತ್ಯಗೊಂಡಿತ್ತು. ಬಳಿಕ ರಿಂಕು ಆತನನ್ನು ಮನೆಗೆ ಕರೆದು ಮಾತುಕತೆ ನಡೆಸಿದ್ದ. ಈ ವೇಳೆ ನಾಲ್ವರು ಆತನನ್ನು ತಳ್ಳಾಡಿ, ಕಂಬಕ್ಕೆ ಕಟ್ಟಿದ್ದರು. ಆತ ನೀರು ಕೇಳಿದಾಗ ಬಲವಂತವಾಗಿ ಮೂತ್ರ ಕೂಡಿಸಿದ್ದರು.
ಘಟನೆ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.