
ನವದೆಹಲಿ: ಹಾಲಿನ ಕಲಬೆರೆಕೆ ದಂಧೆಯಲ್ಲಿ ತೊಡಗಿರುವ ದುಷ್ಕರ್ಮಿಗಳಿಗೆ ಮರಣದಂಡನೆ ವಿಧಿಸಲು ಅವಕಾಶ ಕಲ್ಪಿಸುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಬುಧವಾರ ರಾಜ್ಯಸಭೆಯಲ್ಲಿ ಒತ್ತಾಯ ಕೇಳಿಬಂದಿದೆ.
ಎಂದು ರಾಜ್ಯ ಸಭೆಯಲ್ಲಿ ಸದಸ್ಯರು ಬುಧವಾರ
ಸರ್ಕಾರವನ್ನು ಆಗ್ರಹಿಸಿದ್ದಾರೆ.
ದೇಶದಲ್ಲಿ ಹಾಲಿನ ಉತ್ಪಾದನೆಗಿಂತ ನಾಲ್ಕು ಪಟ್ಟು ಹಾಲು ಬಳಕೆಯಾಗುತ್ತಿದ್ದು, ಹಾಲಿನ ಕಲಬೆರೆಕೆ ದಂಧೆ
ವ್ಯಾಪಕವಾಗಿ ನಡೆಯುತ್ತಿದೆ. ಇಂತಹ ದಂಧೆ ನಡೆಯುವ ಸ್ಥಳದ
ಜಿಲ್ಲಾಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಬೇಕು ಎಂದು ಬಿಜೆಪಿ ಸದಸ್ಯ ಹರ್ ನಾಥ್ ಸಿಂಗ್ ಯಾದವ್ ರಾಜ್ಯಸಬೆಯನ್ನು ಒತ್ತಾಯಿಸಿದರು.
ಇದಕ್ಕೆ ಇತರ ಸದಸ್ಯರು ಧ್ವನಿಗೂಡಿಸಿದರು.