ಶಿಮ್ಲಾ: ಹಿಮಾಚಲಪ್ರದೇಶದ ಕುಫ್ರಿಯ ಪ್ರವಾಸಿ ಮಂದಿರದ ಬಳಿ ಭಾರಿ ಹಿಮಪಾತದಿಂದಾಗಿ ಸಿಲುಕಿದ್ದ ಮಹಾರಾಷ್ಟ್ರದ 90 ಮಂದಿ ಸೇರಿದಂತೆ 170 ಮಂದಿ ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ.
ಇಲ್ಲಿನ ಚಾರ್ರಬರಾ-ಕುಫ್ರಿ ವಿಭಾಗದಲ್ಲಿ ಹಿಮ ತೆರವುಗೊಳಿಸಿದ ನಂತರ ಹಸನ್ ಕಣಿವೆಯ ಕಡೆಗೆ ತಂಡವು ಹಿಂತಿರುಗುತ್ತಿದ್ದಾಗ ಸುಮಾರು 80ಕ್ಕೂ ಹೆಚ್ಚು ಲಘು ವಾಹನಗಳು ಮತ್ತು ಎರಡು ಪ್ರವಾಸಿ ಬಸ್ಸುಗಳು ಹಿಮದಲ್ಲಿ ಸಿಲುಕಿಕೊಂಡಿದ್ದವು. ಅಂದೇ ತಡರಾತ್ರಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದು, ಬೆಳಗ್ಗೆ 4 ಗಂಟೆಗೆ ಕೊನೆಗೊಂಡಿದೆ ಎಂದು ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಮ್ವಾಲ್ ತಿಳಿಸಿದ್ದಾರೆ.