ಶ್ರೀನಗರ: ಕುಪ್ವಾರ ಗಡಿ ನಿಯಂತ್ರಣ ರೇಖೆಯ ಬಳಿ ಸಂಭವಿಸಿದ ಹಿಮಪಾತದಲ್ಲಿ ನಾಲ್ವರು ಸೈನಿಕರು ಜೀವಂತ ಹುದುಗಿದ್ದು, ಓರ್ವ ಯೋಧನನ್ನು ರಕ್ಷಿಸಲಾಗಿದೆ. ಮೂವರು ಹುತಾತ್ಮರಾಗಿದ್ದಾರೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ನಿನ್ನೆ ಸಂಜೆ ಕರ್ನಾ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ-ಎಲ್‌ಒಸಿ ಬಳಿ ಭಾರಿ ಹಿಮಪಾತದಿಂದ ಈಗಲ್ ಪೋಸ್ಟ್‌ನ ನಾಲ್ವರು ಸೈನಿಕರು ಹುದುಗಿ ಹೋಗಿದ್ದರು. ಸಮೀಪದ ಶಿಬಿರಗಳಲ್ಲಿದ್ದ ಸೈನಿಕರು ಕೂಡಲೇ ಭಾರಿ ಶೋಧ ಕಾರ್ಯಾಚರಣೆ ನಡೆಸಿ ವಿಕಾಸ್ ಕುಮಾರ್ ಎಂದು ಗುರುತಿಸಲ್ಪಟ್ಟ ಓರ್ವ ಸೈನಿಕನನ್ನು ರಕ್ಷಿಸಿದ್ದಾರೆ.
ಹಿಮಪಾತ: ಮೂವರು ಯೋಧರು ಹುತಾತ್ಮ
Follow Us