ಹೈದರಾಬಾದ್: ನಾಲ್ವರು ಅತ್ಯಾಚಾರಿಗಳನ್ನು ಗುಂಡಿಕ್ಕಿ ಕೊಂದ ಹೈದರಾಬಾದ್ ನ ಶಾದ್ ನಗರಕ್ಕೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಘಟನೆಯ ಸಂಪೂರ್ಣ ಮಾಹಿತಿ ಕಲೆ ಹಾಕಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ತಂಡದ ಸದಸ್ಯರಿಗೆ ಘಟನೆಯ ಮಾಹಿತಿ ನೀಡಿದರು. ದೆಹಲಿಯಿಂದ ಆಗಮಿಸಿದ ಎನ್ ಎಚ್ ಆರ್ ಸಿಯ ನಾಲ್ಕು ಮಂದಿ ಪತ್ರಕರ್ತರ ಜೊತೆ ಮಾತನಾಡಲು ನಿರಾಕರಿಸಿದರು. ತೆಲಂಗಾಣದ ಪೊಲೀಸ್ ಮಹಾ ನಿರ್ದೇಶಕರ ಜೊತೆ ತಂಡದ ಸದಸ್ಯರು ಚರ್ಚೆ ನಡೆಸುವ ಸಾಧ್ಯತೆಗಳಿವೆ