ನವದೆಹಲಿ: ಹೈದರಾಬಾದ್ ಎನ್ ಕೌಂಟರ್ ಕುರಿತಂತೆ ತನಿಖೆ ನಡೆಸುವುದಾಗಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹೇಳಿದೆ. ಸಂಸ್ಛೆಯ ತನಿಖಾ ವಿಭಾಗ ಈ ಸಂಬಂಧ ತನಿಖೆ ನಡೆಸಲಿದೆ. ಇಂದು ಮುಂಜಾನೆ ಹೈದರಾಬಾದ್ ಹೊರ ವಲಯದಲ್ಲಿ ಪೊಲೀಸರು ನಡೆಸಿದ ಗುಂಡಿನ ಚಕಮಕಿಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಈ ದುರುಳರು ಬಳಿಕ ಬೆಂಕಿ ಹಚ್ಚಿ ಆಕೆಯನ್ನು ಹತ್ಯೆ ಮಾಡಿದ್ದರು