ಚೆನ್ನೈ: ತೆಲಂಗಾಣದ ದಿಶಾ ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಿದ ಪೊಲೀಸರನ್ನು ಎಲ್ಲರೂ ಕೊಂಡಾಡುತ್ತಿದ್ದರೆ
ಎಐಸಿಸಿ ಸದಸ್ಯ, ಶಿವಗಂಗಾ ಸಂಸದ ಕಾರ್ತಿ ಚಿದಂಬರಂ ಎನ್ ಕೌಂಟರ್ ಅನ್ನು ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಅತ್ಯಾಚಾರ ಮಾಡುವುದು ಹೇಯ ಕೃತ್ಯ. ಕಾನೂನಿನ ಚೌಕಟ್ಟಿನಲ್ಲಿ ಇಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಆದರೆ ಎನ್ ಕೌಂಟರ್ ಮೂಲಕ ಅತ್ಯಾಚಾರಿಗಳನ್ನು ಹತ್ಯೆ ಮಾಡುವುದು ಸಮಾಜಕ್ಕೆ ಅಂಟಿದ ಕಳಂಕ. ಅನ್ಯಾಯಕ್ಕೊಳಗಾದವರಿಗೆ ಶೀಘ್ರ ನ್ಯಾಯ ದೊರಕಿಸಿಕೊಡಬೇಕಾಗಿರುವುದು ನಿಜವಾದರೂ ಎನ್ ಕೌಂಟರ್ ಬೇಕಾಗಿರಲಿಲ್ಲ ಎಂದಿದ್ದಾರೆ.
ವೃಂದಾ ಗ್ರೋವರ್ ಎಂಬ ಹಿರಿಯ ನ್ಯಾಯವಾದಿ ಕೂಡ ಈ ಎನ್ ಕೌಂಟರ್ ಅನ್ನು ಟೀಕಿಸಿದ್ದಾರೆ. “ಇದು ಸರ್ವಥಾ ಒಪ್ಪುವಂಥದ್ದಲ್ಲ ಎಂದವರು ಹೇಳಿದ್ದಾರೆ.
ಹೈದ್ರಾಬಾದ್ ಎನ್ಕೌಂಟರ್ ಗೆ ಕಾರ್ತಿ ಚಿದಂಬರಂ ವಿರೋಧ
Follow Us