Saturday, April 17, 2021

ಮದುವೆಯಾಗುವುದಾಗಿ ನಂಬಿಸಿ ವೃದ್ಧನಿಗೆ 1.3 ಕೋಟಿ ರೂ. ವಂಚನೆ

newsics.com
ಮುಂಬೈ: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರು 73 ವರ್ಷದ ವೃದ್ಧರೊಬ್ಬರಿಗೆ 1.3 ಕೋಟಿ ರೂ. ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಮುಂಬೈನ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಶಾಲಿನಿ ಸಿಂಗ್ ವಿರುದ್ಧ ದೂರು ದಾಖಲಾಗಿದೆ. ಮದುವೆಯಾಗುವುದಾಗಿ ಮತ್ತು ವೃದ್ಧಾಪ್ಯದಲ್ಲಿ ನೋಡಿಕೊಳ್ಳುವುದಾಗಿ ಭರವಸೆ ನೀಡಿ ಮಹಿಳೆ ಹಣ ಪಡೆದುಕೊಂಡಿದ್ದಳು ಎನ್ನಲಾಗಿದೆ.
ಮಹಿಳೆ ಶಾಲಿನಿ ಸಿಂಗ್ ವಿರುದ್ಧ ಮುಂಬೈನ ಮಲಾಡ್‌ನ ಮಾಲ್ವಾನಿ ನಿವಾಸಿ ಜೆರೋನ್‌ ಡಿಸೋಜಾ ಅಂಧೇರಿ ಪೊಲೀಸರಿಗೆ 2020 ರ ಡಿಸೆಂಬರ್’ನಲ್ಲೆ ದೂರು ನೀಡಿದ್ದು, ಈಗ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮದುವೆಯ ನೆಪದಲ್ಲಿ ಆ ಮಹಿಳೆ ತನ್ನೊಂದಿಗೆ ಸ್ನೇಹ ಬೆಳೆಸಿದ್ದರು. ನಂತರ 1 ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ವಂಚಿಸಿದ್ದಾರೆಂದು ಡಿಸೋಜಾ ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಅವರಿಂದ ಪಡೆದ ಹಣದಿಂದ ವ್ಯವಹಾರ ಆರಂಭಿಸುವುದಾಗಿ ತಿಳಿಸಿದ್ದರು. ಈ ಹೂಡಿಕೆಯಿಂದ ಬರುವ ಲಾಭವನ್ನು ಇಬ್ಬರೂ ಸಮಾನವಾಗಿ ಹಂಚಿಕೊಳ್ಳೋಣ ಎಂದೂ ಹೇಳಿಕೊಂಡಿದ್ದಳೆಂದು ಡಿಸೋಜಾ ದೂರಿನಲ್ಲಿ ಹೇಳಿದ್ದಾರೆ.
2010 ರಲ್ಲಿ ಡಿಸೋಜಾ ಮುಂಬೈನ ಸಾಂಟಾಕ್ರೂಜ್‌ ದೇಶೀಯ ವಿಮಾನ ನಿಲ್ದಾಣದ ಬಳಿಯಲ್ಲಿದ್ದ ತನ್ನ ತಂದೆಯ ಜಮೀನನ್ನು ಮಾರಾಟ ಮಾಡಿದ್ದರು. ಈ ಪೈಕಿ ಮಾರಾಟದ ಬೆಲೆಯ ಶೇಕಡಾ 20 ರಷ್ಟು ಹಣ ಅಂದರೆ 2 ಕೋಟಿ ರೂ. ಪಡೆದುಕೊಂಡಿದ್ದರು. ಅಂತಿಮವಾಗಿ, ಅವರು ಆ ಹಣವನ್ನು ಶಾಲಿನಿ ಸಿಂಗ್‌ ಕೆಲಸ ಮಾಡುತ್ತಿದ್ದ ಖಾಸಗಿ ಬ್ಯಾಂಕಿನಲ್ಲಿ ನಾಲ್ಕು ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಿದ್ದರು.
ಇದನ್ನು ಗಮನಿಸಿದ ಶಾಲಿನಿ ಸಿಂಗ್ ಡಿಸೋಜಾ ಜತೆ ಸ್ನೇಹ ಬೆಳೆಸಿದರು. ಇಬ್ಬರೂ ರೆಸ್ಟೋರೆಂಟ್‌ಗಳಲ್ಲಿ ಭೇಟಿಯಾಗಲು ಪ್ರಾರಂಭಿಸಿದರು. ಹಣ ಪಡೆದ ಬಳಿಕ ಶಾಲಿನಿ ಸಿಂಗ್, ಡಿಸೋಜಾ ಅವರೊಂದಿಗಿನ ಸಂಪರ್ಕ ಕಡಿತಗೊಳಿಸಿದರು. ಹಣದೊಂದಿಗೆ ಆಕೆ ತನ್ನ ಹಳ್ಳಿಗೆ ಓಡಿಹೋಗಿ ಬೇರೊಬ್ಬರನ್ನು ಮದುವೆಯಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿಯಲ್ಲಿ ಯುವತಿ ಬಂಧನ
ಇದೇ ರೀತಿ, ದೆಹಲಿಯ ನೆಹರೂ ವಿಹಾರ್‌ನಲ್ಲಿ ವೃದ್ಧೆಯೊಬ್ಬರಿಗೆ ಕಾಲೇಜಿಗೆ ಹೋಗುತ್ತಿದ್ದ ಯುವತಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಯುವತಿ 2019ರ ನವೆಂಬರ್ ಮತ್ತು 2020ರ ಮಾರ್ಚ್ ನಡುವೆ 2,38,000 ರೂ.ಗಳನ್ನು ವಂಚಿಸಿದ್ದಕ್ಕಾಗಿ ಯುವತಿಯನ್ನು ಬಂಧಿಸಲಾಗಿದೆ. ಅನಧಿಕೃತ ವಹಿವಾಟಿನ ಬಗ್ಗೆ ವೃದ್ಧೆಯ ಪುತ್ರ ಅರಿತುಕೊಂಡು ದೆಹಲಿ ಉತ್ತರ ಜಿಲ್ಲೆಯ ಸೈಬರ್ ಸೆಲ್‌ಗೆ ಎಫ್‌ಐಆರ್ ದಾಖಲಿಸಿದ್ದರು. ಹೊಸ ಡೆಬಿಟ್‌ ಕಾರ್ಡ್ ತೆಗೆದುಕೊಂಡಿದ್ದ ಮಹಿಳೆಯನ್ನು ಎಟಿಎಂಗೆ ಕರೆದುಕೊಂಡು ಹೋಗಿದ್ದ ಯುವತಿ, ಎಟಿಎಂ ಬಳಕೆ ಮಾಡುವುದನ್ನು ಹೇಳಿಕೊಡುವ ನೆಪದಲ್ಲಿ ಪಿನ್ ನಂಬರ್‌ ತಿಳಿದುಕೊಂಡು ಈ ಕೃತ್ಯವೆಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಯಾಗಲು ನಿರಾಕರಣೆ: ಭಗ್ನ ಪ್ರೇಮಿಯಿದ ಯುವತಿ, ತಾಯಿಯ ಹತ್ಯೆ

ಮತ್ತಷ್ಟು ಸುದ್ದಿಗಳು

Latest News

ಬೆಂಗಳೂರಿನಲ್ಲಿ 11, 404 ಕೊರೋನಾ ಸೋಂಕು, ರಾಜ್ಯದಲ್ಲಿ 17489 ಪ್ರಕರಣ, 80 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ  ರಾಜ್ಯದಲ್ಲಿ ಹೊಸದಾಗಿ  17,489  ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ...

ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿ ಹೊರಟ ಯುವತಿಗೆ ದಂಡ

newsics.com ಲಂಡನ್: ಜನರು ಲಾಕ್ ಡೌನ್ ವೇಳೆ ಮನೆಯಲ್ಲಿ ಇರಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದರೆ ಲಂಡನ್ ನಲ್ಲಿ ಯುವತಿಯೊಬ್ಬಳು ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿಕೊಂಡು ಹೋಗಿದ್ದಳು. ಈ ಸಾಹಸಕ್ಕೆ ಹೋದ ಯುವತಿ...

41 ಅಕ್ರಮ ವಲಸಿಗರ ಜಲ ಸಮಾಧಿ

newsics.com ಟ್ಯುನಿಷಿಯಾ: ಇಟಲಿಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ 41 ವಲಸಿಗರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಟ್ಯುನಿಷಿಯಾ ಸಮುದ್ರ ತೀರದಲ್ಲಿ ಈ  ದುರಂತ ಸಂಭವಿಸಿದೆ. ಈ ವಲಸಿಗರಿದ್ದ ಹಡಗು ಅಪಘಾತಕ್ಕೀಡಾದ ಪರಿಣಾಮ ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ....
- Advertisement -
error: Content is protected !!