ನವದೆಹಲಿ: ತರಕಾರಿ ಬೆಲೆಗಳು ಗಗನಮುಖಿಯಾಗಿವೆ. ರಾಷ್ಟ್ರ ರಾಜಧಾನಿಯಲ್ಲಿ ಒಂದು ಕೆ.ಜಿ. ಟೊಮೇಟೊ ಬೆಲೆ 80-100 ರೂಪಾಯಿ ಗಡಿ ದಾಟಿದೆ.
ಈ ಮಾಹಿತಿಯನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ. ಈ ಋತುವಿನಲ್ಲಿ ಟೊಮೊಟೊ ಹಾಳಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಟೊಮೊಟೊ ಬೆಲೆ ಗಗನಕ್ಕೇರಿದೆ ಎಂದೂ ಸಮಜಾಯಿಷಿ ನೀಡಿದ್ದಾರೆ.
ಟೊಮೊಟೊ ಬೆಲೆಯಲ್ಲಿ ಏರುಪೇರು ಸಾಮಾನ್ಯ. ಆರ್ಥಿಕ ಸ್ಥಿತಿ ಸುಧಾರಿಸುತ್ತಿದ್ದಂತೆ, ಋತು ಬದಲಾದ ಬಳಿಕ ಟೊಮೇಟೊ ಬೆಲೆ ಕೆ.ಜಿ.ಗೆ 20 ರೂಪಾಯಿಗೆ ಇಳಿಯಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಭಾರಿ ಮಳೆಯಿಂದಾಗಿ ಬೆಳೆ ಹಾಳಾಗುತ್ತಿದೆ. ಅದೇ ಸಮಯದಲ್ಲಿ, ಲಾಕ್ ಡೌನ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ವೆಚ್ಚಗಳು ಹೆಚ್ಚಾಗಿವೆ. ಅದಕ್ಕಾಗಿಯೇ ಟೊಮೇಟೊ ಸೇರಿದಂತೆ ಇತರ ತರಕಾರಿಗಳ ಬೆಲೆ ಹೆಚ್ಚಾಗಿದೆ ಎಂದು ಪಾಸ್ವಾನ್ ತಿಳಿಸಿದ್ದಾರೆ. ಅಂದಹಾಗೆ, ಬೆಂಗಳೂರಿನಲ್ಲಿ 60- 70
ರೂ.ಗೆ ಒಂದು ಕೆಜಿ ಟೊಮೆಟೊ ದೊರೆಯುತ್ತಿದೆ.
ಮಂತ್ರಾಲಯದ ಅರ್ಚಕರಿಗೆ ಕೊರೋನಾ ಸೋಂಕು, ಭಕ್ತರಲ್ಲಿ ಆತಂಕ