Saturday, June 10, 2023

ಸುಪ್ರೀಂ ಚಾಟಿ ಪರಿಣಾಮ; 10 ಸಾವಿರ ಕೋಟಿ ರೂ. ಬಾಕಿ ಪಾವತಿಸಿದ ಏರ್‌ಟೆಲ್

Follow Us

ನವದೆಹಲಿ: ಸುಪ್ರೀಂಕೋರ್ಟ್ ಚಾಟಿ ಬೀಸಿದ ಪರಿಣಾಮವಾಗಿ ಏರ್‌ಟೆಲ್ 10,000 ಕೋಟಿ ಬಾಕಿ ಹಣ ತೀರಿಸಿದೆ.
ಈ ಬಗ್ಗೆ ಸೋಮವಾರ ಅಧಿಕೃತ ಹೇಳಿಕೆ ನೀಡಿರುವ ಏರ್‌ಟೆಲ್, ದೂರವಾಣಿ ನಿಗಮಕ್ಕೆ 10,000 ಕೋಟಿ ಹಣವನ್ನು ಪಾವತಿಸಿದ್ದೇವೆ. ಇನ್ನುಳಿದ ಬಾಕಿ ಹಣವನ್ನು ಕಂಪನಿಯ ಸ್ವ ಮೌಲ್ಯಮಾಪನದ ಬಳಿಕ ನಂತರ ಪಾವತಿಸುವುದಾಗಿ ಹೇಳಿದೆ.
ಪರವಾನಗಿ ಶುಲ್ಕ ಸೇರಿ ಇನ್ನೂ ಕೆಲವು ಶುಲ್ಕ ಮತ್ತು ದಂಡಗಳನ್ನು ಏರ್‌ಟೆಲ್ ಪಾವತಿಸಬೇಕಿದ್ದು, ಇನ್ನೂ ಸುಮಾರು 35,000 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ.
ಟೆಲಿಕಾಂ ಸಂಸ್ಥೆಗಳ ಬಾಕಿ ಹಣ ಪಾವತಿ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಸುಪ್ರೀಂ ಸೂಚನೆ ಬಳಿಕ ದೂರವಾಣಿ ಇಲಾಖೆ ಎಲ್ಲ ಟೆಲಿಕಾಂ ಸಂಸ್ಥೆಗಳಿಗೆ ನೊಟೀಸ್ ನೀಡಿ, ಬಾಕಿ ಹಣ ಪಾವತಿಸುವಂತೆ ಒತ್ತಡ ಹೇರಿತ್ತು.

ವೋಡಾಫೋನ್ ಐಡಿಯಾ 2,500 ಕೋಟಿ ಹಾಗೂ ಟಾಟಾ ಗ್ರೂಪ್ 2,190 ಕೋಟಿ ರೂ. ಪಾವತಿ ಮಾಡಿವೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ. ವೋಡಾಫೋನ್ ಐಡಿಯಾ ಕಂಪನಿಯು ಒಟ್ಟೂ 53,000 ಕೋಟಿ ರೂ. ಬಾಕಿಯನ್ನು ಪಾವತಿಸಬೇಕಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

ಗಡಿಯಲ್ಲಿ ಪಾಕ್ ನಿಗೂಢ ಬಲೂನ್ ಪತ್ತೆ: ಸೇನೆಯಿಂದ ಶೋಧ ಕಾರ್ಯ

Newsics.com ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.

ಗ್ಯಾರಂಟಿ ಜಾರಿ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್

newsics.com ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಜಾರಿಗೊಳಿಸಿದ ಬೆನ್ನಲ್ಲೇ ಮದ್ಯದ ಬೆಲೆಯನ್ನು ದುಪ್ಪಟ್ಟು ಮಾಡಿ ಮದ್ಯಪ್ರಿಯರಿಗೆ ಶಾಕ್ ನೀಡಿದೆ. ಕರೆಂಟ್ ಬಿಲ್ ದರ ಏರಿಕೆ ಬಳಿಕ...
- Advertisement -
error: Content is protected !!