Thursday, June 17, 2021

ಚೀನಾದಿಂದ ದೆಹಲಿಗೆ ಬಂತು 100 ಟನ್ ಆಕ್ಸಿಜನ್

newsics.com

ನವದೆಹಲಿ: ಭಾರತದ ಕೊರೋನಾ ವಿರುದ್ಧದ ಹೋರಾಟಕ್ಕೆ 40ಕ್ಕೂ ಹೆಚ್ಚು ರಾಷ್ಟ್ರಗಳು ನೆರವು ನೀಡಿದ್ದು, ಇದೀಗ ಚೀನಾ ಕೂಡ ಗರಿಷ್ಠ ಪ್ರಮಾಣದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಪೂರೈಕೆ ಮಾಡಿದೆ.

3,600 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಭಾರತಕ್ಕೆ ಪೂರೈಕೆ ಮಾಡಿದೆ. ಟನ್‌ಗಳಲ್ಲಿ ಹೇಳುವುದಾದರೆ 100 ಟನ್ ಆಕ್ಸಿಜನ್ ಭಾರತಕ್ಕೆ ಬಂದಿದೆ. ಒಂದೇ ಬಾರಿ ಭಾರತಕ್ಕೆ ಲಭಿಸಿದ ಗರಿಷ್ಠ ಆಕ್ಸಿಜನ್ ಚೀನಾದಿಂದ ಬಂದದ್ದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಚೀನಾದ ಹಂಗ್‌ಝೋ ಏರ್‌ಪೋರ್ಟ್‌ನಿಂದ ಬೋಯಿಂಗ್ 747-400 ವಿಮಾನದ ಮೂಲಕ ಭಾನುವಾರ ದೆಹಲಿಗೆ ಬಂದಿಳಿದಿದೆ. ಬಹುರಾಷ್ಟ್ರೀಯ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕಂಪನಿಯಾದ ಬೊಲ್ಲೂರ್ ಲಾಜಿಸ್ಟಿಕ್ಸ್ ಇಂಡಿಯಾ ಮೂಲಕ ಈ ಆಕ್ಸಿಜನ್ ಲಭ್ಯವಾಗಿದೆ.

ಡಿಆರ್’ಡಿಒದ ಆ್ಯಂಟಿ ಕೊರೋನಾ ಔಷಧ ನಾಳೆ ಬಿಡುಗಡೆ

ಆತಂಕದಿಂದ ನನಗೂ ಹಲವು ರಾತ್ರಿ ನಿದ್ದೆಯಿರಲಿಲ್ಲ: ತೆಂಡೂಲ್ಕರ್

ಮತ್ತಷ್ಟು ಸುದ್ದಿಗಳು

Latest News

ಹೊಸನಗರ ತಾಲೂಕಲ್ಲಿ ದಾಖಲೆಯ ಮಳೆ, ಜೋಗ ಜಲಪಾತಕ್ಕೆ ಜೀವಕಳೆ

ಶಿವಮೊಗ್ಗ: ಲಿಂಗನಮಕ್ಕಿ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಮಳೆಯಾಗಿದ್ದು, ದಾಖಲೆಯ 33 ಸೆಂಟಿ ಮೀಟರ್ ಮಳೆ ಸುರಿದಿದೆ. ಹೊಸನಗರ ತಾಲೂಕಿನಾದ್ಯಂತ ಬುಧವಾರ ಒಂದೇ ದಿನ...

ಗಾಜಿಯಾಬಾದ್ ಹಲ್ಲೆ ಪ್ರಕರಣ: ನಟಿ‌ ಸ್ವರಾ, ಟ್ವಿಟರ್ ಎಂಡಿ‌ ವಿರುದ್ಧ ದೂರು

newsics.com ನವದೆಹಲಿ: ಗಾಜಿಯಾಬಾದ್‌ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸ್ವರಾ ಭಾಸ್ಕರ್, ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಮತ್ತಿತರರ ವಿರುದ್ಧ ದೂರು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ...

ಜುಲೈ 31ರೊಳಗೆ ಸಿಬಿಎಸ್ಇ 12ನೇ ತರಗತಿ ಫಲಿತಾಂಶ

newsics.com ನವದೆಹಲಿ: ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಜುಲೈ 31ರೊಳಗೆ ಪ್ರಕಟವಾಗಲಿದೆ. ಗುರುವಾರ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಗೆ ಈ‌ ಮಾಹಿತಿ ನೀಡಿದೆ. ಇಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ ಅವರು ಸಿಬಿಎಸ್ಇಗೆ 10,...
- Advertisement -
error: Content is protected !!