newsics.com
ಒಡಿಶಾ: ಕಾಳಿಂಗ ಸರ್ಪವೊಂದು ಹೆಬ್ಬಾವನ್ನು ನುಂಗಿರುವ ಘಟನೆ ಅಂಗುಲ್ ಜಿಲ್ಲೆಯ ಸತ್ಕೋಶಿಯಾ ಅಭಯಾರಣ್ಯದ ಕಾರ್ಡಪಾಡಾ ಗ್ರಾಮದಲ್ಲಿ ನಡೆದಿದೆ.
ಕಾಳಿಂಗ ಸರ್ಪ ಹೆಬ್ಬಾವನ್ನು ನುಂಗಿದ ಬಳಿಕ ಕರ್ಡಪದ ಗ್ರಾಮದ ಮನೆಯೊಂದಕ್ಕೆ ನುಗ್ಗಿದೆ. ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಉರಗ ರಕ್ಷಕ ಹಾವನ್ನು ರಕ್ಷಿಸಿದ್ದಾರೆ.
ಆ ವೇಳೆಗಾಗಲೇ ಹೆಬ್ಬಾವು ಮೃತಪಟ್ಟಿದೆ. ಕಾಳಿಂಗ ಸರ್ಪವನ್ನು ನಂತರ ಟಿಕಾರ್ಪಾದ ಅರಣ್ಯಕ್ಕೆ ಬಿಡಲಾಗಿದೆ. ವಿಶ್ವದ ಅತಿ ಉದ್ದದ ವಿಷಕಾರಿ ಹಾವು ಕಿಂಗ್ ಕೋಬ್ರಾಗೆ ಇತರೆ ಹಾವು ಮತ್ತು ಸರೀಸೃಪಗಳು ನೆಚ್ಚಿನ ಆಹಾರವಾಗಿವೆ.