newsics.com
ಜಮ್ಮು- ಕಾಶ್ಮೀರ: ಜಮ್ಮು ಕಾಶ್ಮೀರದ ಕಡಿದಾದ ಪ್ರದೇಶವಾದ ತಾರ್ಸರ್ ಮಾರ್ಸರ್ ಸರೋವರ ವೀಕ್ಷಣೆಗೆ ತೆರಳಿದ್ದ 14 ಜನರ ಪ್ರವಾಸಿಗರ ತಂಡವೊಂದು ಪ್ರತಿಕೂಲ ಹವಾಮಾನಕ್ಕೆ ಸಿಲುಕಿ ನಾಪತ್ತೆಯಾದ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾಡಳಿತ ತಕ್ಷಣವೇ ರಕ್ಷಣಾ ತಂಡವನ್ನು ಸ್ಥಳಕ್ಕೆ ರವಾನಿಸಿ ಕಾರ್ಯಾಚರಣೆ ಆರಂಭಿಸಿದೆ. ಈ ಪ್ರದೇಶವು ಪವಿತ್ರ ಅಮರನಾಥ ಗುಹೆ ಇರುವ ಸನ್ಮೆ ಮಾರ್ಗದಲ್ಲಿ ಬರುತ್ತದೆ.ಚಾರಣದ ಮೂಲಕ ಮಾತ್ರವೇ ಈ ಪ್ರದೇಶ ತಲುಪಬಹುದಾಗಿದೆ.