ತಿರುಪತಿ: ಪೇರೂರು ವಕುಳಾಮಾತ ದೇವಾಲಯದಲ್ಲಿ ಪುರಾತನ ಕಾಲದ ಐತಿಹಾಸಿಕ ಶಾಸನ ಪತ್ತೆಯಾಗಿದೆ.
ಇದು ಸುಮಾರು 1101 ವರ್ಷಗಳಷ್ಟು ಪುರಾತನವಾದದ್ದು ಎಂದು ಪುರಾತತ್ವ ಇಲಾಖೆ ಹೇಳಿದೆ. ವಕುಳಾಮಾತ ದೇವಾಲಯಕ್ಕೆ ಸಂಬಂಧಿಸಿ ಶಾಸನ ಇದಾಗಿದ್ದು, ಬಂಡೆಗಲ್ಲಿನ ಮೇಲೆ ದೇವಾಲಯದ ಕೆಲ ಸಂಗತಿಗಳ ಬಗ್ಗೆ ಬರೆಯಲಾಗಿದೆ. ಟಿಟಿಡಿಗೆ ಸಿಕ್ಕಿರುವ ಈ ಶಾಸನದ ಬಗ್ಗೆ ಪುರಾತತ್ವ ಇಲಾಖೆ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದು, ವಿಷ್ಣುಮೂರ್ತಿ ದೇವಾಲಯ, ದೇವಿಯ ದೇವಾಲಯ ಎಂದು ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ ಎಂದು ಪುರಾತತ್ವ ಇಲಾಖೆ ತಜ್ಞರು ಹೇಳಿದ್ದಾರೆ.
ತಿರುಪತಿಯಲ್ಲಿ 1101 ವರ್ಷಗಳಷ್ಟು ಹಳೆಯ ಶಾಸನ ಪತ್ತೆ
Follow Us