Saturday, April 17, 2021

118 ವರುಷದ ಬಳಿಕ ಭಾರತದಲ್ಲರಳಿತು ಈ ಹರುಷದ ಹೂವು!

ನವದೆಹಲಿ: ನೂರಾ ಹದಿನೆಂಟು ವರ್ಷಗಳ ಬಳಿಕ ಈ ಹೂವು ಭಾರತದಲ್ಲಿ ಅರಳಿದೆ!
ನವದೆಹಲಿಯ ದುಧ್ವಾ ರಾಷ್ಟ್ರೀಯ ಉದ್ಯಾನದಲ್ಲಿ ಅಪರೂಪದ ಆರ್ಕಿಡ್ ಸಸ್ಯ ಕಂಡುಬಂದಿದೆ.
ಗ್ರೌಂಡ್ ಆರ್ಕಿಡ್ (ಯುಲೋಫಿಯಾ ಒಬ್ಟುಸಾ) ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ಪ್ರಭೇದವನ್ನು ಅಳಿವಿನಂಚಿನಲ್ಲಿರುವ ಪ್ರಭೇದಗಳ ಕಾಡು ಪ್ರಾಣಿ ಮತ್ತು ಸಸ್ಯಗಳ ಪ್ರಭೇದ ಎಂದು ವರ್ಗೀಕರಿಸಲಾಗಿದೆ. 118 ವರ್ಷಗಳ ಹಿಂದೆ ಇಂಗ್ಲೆಂಡ್‌ನ ಕ್ಯೂ ಹರ್ಬೇರಿಯಮ್ ಎನ್ನುವವರು ಈ ಆರ್ಕಿಡ್ ಹೂ ಬಗ್ಗೆ ದಾಖಲು ಮಾಡಿದ್ದು, 1902 ರಲ್ಲಿ ಪಿಲಿಭಿತ್‌ನಲ್ಲಿ ಈ ಹೂವನ್ನು ನೋಡಿದ್ದಾಗಿ ಬರೆದುಕೊಂಡಿದ್ದಾರೆ.
ಈ ಆರ್ಕಿಡ್ ಪ್ರಭೇದದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಭಾರತದಲ್ಲಿ ಲಭ್ಯವಿಲ್ಲ ಎಂದು ದುಧ್ವಾ ಕ್ಷೇತ್ರ ನಿರ್ದೇಶಕ ಸಂಜಯ್ ಪಾಠಕ್ ಹೇಳಿದ್ದಾರೆ. ಆದರೂ, ಉತ್ತರ ಭಾರತ ಮತ್ತು ನೇಪಾಳದಲ್ಲಿ ಈ ಹೂವಿನ ಅಸ್ತಿತ್ವವನ್ನು ಉಲ್ಲೇಖಿಸಿವೆ ಎಂದು ಕೆಲವು ವರದಿಗಳು ತಿಳಿಸಿವೆ.
ಜೂನ್ 30 ರಂದು ಮುದಿತ್ ಗುಪ್ತಾ (ಡಬ್ಲ್ಯುಡಬ್ಲ್ಯುಎಫ್) ಮತ್ತು ಫಜ್ಲೂರ್-ರೆಹಮಾನ್ (ಕತ್ರಾನಿಯಘಾಟ್ ಫೌಂಡೇಶನ್) ಜೊತೆಗೆ, ನಾನು ಧಿಧ್ವಾ ರಿಸರ್ವ್‌ನ ಕಿಶನ್‌ಪುರ ಮತ್ತು ಸೋನಾರಿಪುರ ಶ್ರೇಣಿಗಳಲ್ಲಿ ಹುಲ್ಲುಗಾವಲು ಸಮೀಕ್ಷೆ ನಡೆಸುತ್ತಿದ್ದಾಗ ಈ ಹೂವನ್ನು ನೋಡಿರುವುದಾಗಿ ದುಧ್ವಾ ಕ್ಷೇತ್ರ ನಿರ್ದೇಶಕ ಸಂಜಯ್ ಪಾಠಕ್ ತಿಳಿಸಿದ್ದಾರೆ.
ಸೂಕ್ಷ್ಮ ಹೂವುಗಳ ಹೂಗೊಂಚಲುಗಳೊಂದಿಗೆ ಇದ್ದ ಗಿಡವೊಂದನ್ನು ನೋಡಿದ ನಾವು ಕುತೂಹಲದಿಂದ, ಇವುಗಳನ್ನು ಹಿಂದೆಂದೂ ಕಾಣದಿದ್ದರಿಂದ ನಾವು ಅವುಗಳ ಪೋಟೋ ತೆಗೆದುಕೊಂಡು, ಪರಿಸರವಾದಿಗಳು ಮತ್ತು ಸಸ್ಯವಿಜ್ಞಾನಿಗಳನ್ನು ಸಂಪರ್ಕಿಸಿದ್ದೇವೆ. ಈ ಪೈಕಿ ಕೂಡಲೇ ಹೂವಿನ ಫೋಟೋ ಕ್ಲಿಕ್ಕಿಸಿ ಬಾಂಗ್ಲಾದೇಶದ ಸಸ್ಯಶಾಸ್ತ್ರಜ್ಞ ಮೊಹ್ಮದ್ ಶರೀಫ್ ಹುಸೈನ್ ಸೌರವ್ ಅವರಿಗೆ ಕಳಿಸಿದ್ದ ವೇಳೆಯಲ್ಲಿ ಅವರು ಈ ಹೂ ಯುಲೋಫಿಯಾ ಓಬ್ಟಿಸಾ ಎಂದು ಖಚಿತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!