newsics.com
ಚಂಡಿಗಢ: ಬಕೆನ್‍ವಾಲಾ ಎಂಬಲ್ಲಿ ಭೀಕರ ಸುಂಟರಗಾಳಿ ಅಪ್ಪಳಿಸಿ 30 ಮನೆಗಳಿಗೆ ಹಾನಿಯಾಗಿದೆ. ಹಾಗೂ 12 ಜನ ಗಾಯಗೊಂಡಿದ್ದಾರೆ.
ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಗ್ರಾಮಸ್ಥರು ಸುಂಟರಗಾಳಿ ಬೀಸಿದೆ. ಸುಮಾರು 2ರಿಂದ 2.5 ಕಿಮೀ ಪ್ರದೇಶದಲ್ಲಿ ಸುಂಟರಗಾಳಿ ಹಾನಿಯನ್ನುಂಟು ಮಾಡಿದೆ ಎಂದು ಬಕೆನ್‍ವಾಲಾ ನಿವಾಸಿ ಗುರುಮುಖ್ ಸಿಂಗ್ ಹೇಳಿದ್ದಾರೆ.
ಗಾಳಿಯ ರಭಸಕ್ಕೆ ಹೊಲಗಳು ಮತ್ತು ತೋಟಗಳಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿದೆ. ಮನೆ ಹಾನಿಗೊಳಗಾದ ಗ್ರಾಮಸ್ಥರನ್ನು ಸ್ಥಳೀಯ ಸರ್ಕಾರಿ ಶಾಲೆಗೆ ಸ್ಥಳಾಂತರಿಸಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.