Monday, September 27, 2021

ಆನ್’ಲೈನ್ ಗೇಮ್’ಗೆ ಬಾಲಕ ಬಲಿ

Follow Us

newsics.com

ಭೂಪಾಲ್(ಮಧ್ಯಪ್ರದೇಶ): ಆನ್‍ಲೈನ್ ಗೇಮ್‍ನಲ್ಲಿ 40 ಸಾವಿರ ರೂ. ಕಳೆದುಕೊಂಡ ಬಾಲಕನೊಬ್ಬ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಧ್ಯಪ್ರದೇಶದ ಚತ್ತರ್‍ಪುರ್ ನಲ್ಲಿ ಈ ಘಟನೆ ನಡೆದಿದೆ. ಲ್ಯಾಬೊರೇಟರಿಯೊಂದರ ಮಾಲೀಕರ ಪುತ್ರ 6ನೆ ಕ್ಲಾಸ್‍ನಲ್ಲಿ ಓದುತ್ತಿರುವ ಬಾಲಕ ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಮರಣ ಪತ್ರ ಬರೆದಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಫ್ರೀ ಫೈಯರ್ ಆನ್‍ಲೈನ್ ಗೇಮ್‍ನಲ್ಲಿ ನಾನು ಹಣ ಕಳೆದುಕೊಂಡಿದ್ದಕ್ಕಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದೇನೆ. ನನ್ನ ಈ ತಪ್ಪಿಗೆ ಕ್ಷಮೆ ಇರಲಿ ಎಂದು 13 ವರ್ಷದ ಬಾಲಕ ಮರಣ ಪತ್ರದಲ್ಲಿ ತನ್ನ ತಾಯಿಗೆ ಮನವಿ ಮಾಡಿದ್ದಾನೆ.

ಅಕೌಂಟ್‍ನಿಂದ 40 ಸಾವಿರ ಡ್ರಾ ಮಾಡಿದ ಮೆಸೇಜ್ ಆತನ ತಾಯಿಯ ಮೊಬೈಲ್‍ಗೆ ಬಂದ ಕೂಡಲೇ ಆಕೆ ತನ್ನ ಮಗನಿಗೆ ದೂರವಾಣಿ ಕರೆ ಮಾಡಿ ಬೈದಿದ್ದಾರೆ. ಈ ಘಟನೆಯ ನಂತರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸ್ಕಸ್ ಥ್ರೋನಲ್ಲಿ ಕಮಲ್‍ಪ್ರೀತ್ ಫೈನಲ್’ಗೆ‌ ಲಗ್ಗೆ: ಪದಕ ನಿರೀಕ್ಷೆ

ಭದ್ರತಾ ಪಡೆಗಳಿಂದ ಇಬ್ಬರು ಉಗ್ರರ ಹತ್ಯೆ

ಮತ್ತಷ್ಟು ಸುದ್ದಿಗಳು

Latest News

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಮತ್ತೆ ಅಪಘಾತ: ಇಬ್ಬರು ಟೆಕ್ಕಿಗಳ ಸಾವು

newsics.com ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಮತ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಟೆಕ್ಕಿಗಳು ಅಸುನೀಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಫೇಸ್ 1 ಹಾಗೂ ಫೇಸ್ 2 ಬೆಸೆಯುವ ಲಿಂಕ್...

ಹೊಸ ಸಂಸತ್ ಕಟ್ಟಡ ನಿರ್ಮಾಣ ಸ್ಥಳಕ್ಕೆ ಪ್ರಧಾನಿ ಮೋದಿ ದಿಢೀರ್ ಭೇಟಿ

newsics.com ನವದೆಹಲಿ: ಪ್ರಧಾನಿ ನರೇಂದ್ರ‌ ಮೋದಿ ಭಾನುವಾರ ರಾತ್ರಿ ಹೊಸ ಸಂಸತ್‌ ಕಟ್ಟಡದ‌ ನಿರ್ಮಾಣ ಸ್ಥಳಕ್ಕೆ ದಿಢೀರ್ ಭೇಟಿ‌ ನೀಡಿದರು. ಅಮೆರಿಕದಿಂದ ಹಿಂದಿರುಗಿ 24 ಗಂಟೆಗಿಂತಲೂ ಮುಂಚೆ ಪ್ರಧಾನಿ ಮೋದಿ ಭಾನುವಾರ ರಾತ್ರಿ 8: 45...

ಮುಂಬೈ ವಿರುದ್ಧ ರಾಯಲ್ ಚಾಲೆಂಜರ್ಸ್’ಗೆ 54 ರನ್’ಗಳ ಭರ್ಜರಿ ಜಯ

newsics.com ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಲ್ ಪಂದ್ಯದಲ್ಲಿ 54 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ನಾಯಕ ವಿರಾಟ್ ಕೊಹ್ಲಿ (51) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್...
- Advertisement -
error: Content is protected !!