Wednesday, November 30, 2022

ದೇವಾಲಯದಲ್ಲಿ ವಿಗ್ರಹ, ಗೋಡೆ, ನೆಲದ ಮೇಲೆ 8 ಕೋಟಿ ಕರೆನ್ಸಿ ನೋಟು, ಚಿನ್ನದಿಂದ ಅಲಂಕಾರ!

Follow Us

newsics.com

ಆಂಧ್ರ ಪ್ರದೇಶ: ಭಕ್ತರು ನೀಡಿರುವ ಹಣ- ಆಭರಣ ಬಳಸಿ (ಇದು ಹುಂಡಿಗೆ ಹಾಕಿರುವ ಕಾಣಿಕೆಯಲ್ಲ) ದೇವಸ್ಥಾನವೊಂದರಲ್ಲಿ ದೇವಿಗೆ ಅಲಂಕಾರ ಮಾಡಲಾಗಿದೆ.

ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿರುವ 135 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ, ಆಡಳಿತ ಸಮಿತಿಯು ನವರಾತ್ರಿ ಹಬ್ಬದ ಋತುವಿನ ಭಕ್ತರು ನೀಡಿರುವ ಕೊಡುಗೆಗಳನ್ನು ಬಳಸಿ ವಾಸವಿ ಕನ್ನಿಕಾ ಪರಮೇಶ್ವರಿ ದೇವಿಯನ್ನು ಅದ್ದೂರಿಯಾಗಿ ಅಲಂಕಾರ ಮಾಡಿದ್ದಾರೆ.

ನೋಟುಗಳಿಂದ ಮಾಡಿದ ಬಂಟಿಂಗ್ಸ್‌ಗಳನ್ನೂ ಸಹ ಮರಗಳ ಮೇಲೆ ಮತ್ತು ಚಾವಣಿಯ ಮೇಲೆ ನೇತುಹಾಕಲಾಗಿದೆ. ನವರಾತ್ರಿ ಮತ್ತು ದಸರಾ ಹಬ್ಬದ ಋತುವಿನಲ್ಲಿ ಕಂಡುಬಂದಿರುವ ಈ ಅಲಂಕಾರವು 8 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. . ಅಂದಹಾಗೆ ದೇವಾಲಯವು ಈ ಹಿಂದೆ ಸುಮಾರು 5 ಕೋಟಿ ಮೌಲ್ಯದ ಕರೆನ್ಸಿ ಅಲಂಕಾರವನ್ನು ಕಂಡಿದೆ.

ಇದು ಸಾರ್ವಜನಿಕ ಕೊಡುಗೆಯಾಗಿದೆ ಮತ್ತು ಪೂಜೆ ಮುಗಿದ ನಂತರ ಹಿಂದಿರುಗಿಸಲಾಗುತ್ತದೆ. ಆದರೆ ಇದು ದೇವಾಲಯದ ಟ್ರಸ್ಟ್‌ಗೆ ಹೋಗುವುದಿಲ್ಲ.

ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಇನ್ನಿಲ್ಲ!

ಮತ್ತಷ್ಟು ಸುದ್ದಿಗಳು

vertical

Latest News

ಹಾಕಿ ಟೆಸ್ಟ್‌- 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ

newsics.com ಸಿಡ್ನಿ: ಹಾಕಿ ಟೆಸ್ಟ್‌ ನಲ್ಲಿ ಭಾರತ 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ...

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್ ಮೂಲಕ ಖಾತೆ ತೆರೆದಿದ್ದು, ಡಾಲರ್‌ಗಳ ಮೂಲಕ...

ನಟಿ ಮಲೈಕಾ ಅರೋರಾ ಪ್ರೆಗ್ನೆಂಟ್!

newsics.com ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರಿಯತಮ ಅರ್ಜುನ್ ಕಪೂರ್ ಮಗುವಿಗೆ ತಾಯಿ ಆಗ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಮಲೈಕಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಸಂತಸದ ವಿಚಾರವನ್ನು ಸದ್ಯದಲ್ಲೇ ಶೇರ್ ಮಾಡುತ್ತಾರೆ ಎಂದು ಅವರ...
- Advertisement -
error: Content is protected !!