newsics.com
ನವದೆಹಲಿ: ವಿವಿಧ 9 ಬ್ಯಾಂಕುಗಳಿಗೆ 1,400 ಕೋಟಿ ರೂ.ಗಳನ್ನು ವಂಚಿಸಿದ ಆರೋಪದಲ್ಲಿ ಡೇರಿ ಉತ್ಪನ್ನಗಳ ತಯಾರಿಕಾ ಕಂಪನಿ ಕ್ವಾಲಿಟಿ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ದೆಹಲಿ ಸೇರಿದಂತೆ ವಿವಿಧ ಎಂಟು ಕಡೆ ಸಿಬಿಐ ಅಧಿಕಾರಿಗಳು ಸೋಮವಾರ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಪ್ರಕರಣ ದಾಖಲಾಗಿದೆ. ಸಿಬಿಐ ಹೆಸರಿಸಿರುವ ಆರೋಪಿಗಳಲ್ಲಿ ಕ್ವಾಲಿಟಿ ಕಂಪನಿ ನಿರ್ದೇಶಕರಾದ ಸಂಜಯ ಧಿಂಗ್ರಾ, ಸಿದ್ಧಾಂತ ಗುಪ್ತಾ ಮತ್ತು ಅರುಣ ಶ್ರೀವಾಸ್ತವ ಸೇರಿದ್ದಾರೆ. 2012ರಲ್ಲಿ ಬ್ಯಾಂಕ್ ಆಫ್ ಇಂಡಿಯಾದ ನೇತೃತ್ವದಲ್ಲಿ ರಚನೆಯಾಗಿದ್ದ 10 ಬ್ಯಾಂಕುಗಳ ಕೂಟವು ಅವರ ವಿರುದ್ಧ ವಂಚನೆ, ಫೋರ್ಜರಿ, ಕ್ರಿಮಿನಲ್ ಒಳಸಂಚು ಮತ್ತು ಭ್ರಷ್ಟಾಚಾರದ ಆರೋಪ ಮಾಡಿತ್ತು. 2010ರಿಂದ ಕ್ವಾಲಿಟಿ ಕಂಪನಿ ಸಾಲ ಪಡೆದುಕೊಂಡಿತ್ತು. 2018ರ ಆರಂಭದಿಂದ ಮರುಪಾವತಿ ಮಾಡದೆ ಬಾಕಿ ಉಳಿಸಿಕೊಂಡಿತ್ತು. ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಆಂಧ್ರ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಐಡಿಬಿಐ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಧನಲಕ್ಷ್ಮಿ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‌ಗಳಲ್ಲಿ ಕ್ವಾಲಿಟಿ ಕಂಪನಿ ಸಾಲ ಮಾಡಿ ಮರುಪಾವತಿಸದೆ ವಂಚಿಸಿದೆ ಎಂದು ಆರೋಪಿಸಲಾಗಿದೆ.
2008ರ ಬೆಂಗಳೂರು ಸ್ಫೋಟ ಪ್ರಕರಣ: ಕೇರಳದಲ್ಲಿ ಆರೋಪಿ ಬಂಧನ
12 ಕೋಟಿ ಲಾಟರಿ ಗೆದ್ದ ದೇಗುಲದ ಕ್ಲರ್ಕ್!