newsics.com
ಮಹಾರಾಷ್ಟ್ರ; ಪಾಲ್ಗಾರ್ನ ಮಾದಕ ವಸ್ತು ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ ಮುಂಬೈ ಪೊಲೀಸರು, 1,400 ಕೋಟಿ ಮೊತ್ತದ 700 ಕಿಲೋಗ್ರಾಮ್ ಗೂ ಹೆಚ್ಚಿನ ಪ್ರಮಾಣದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ದಾಳಿಯಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಮುಂಬೈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡ್ರಗ್ ಪೆಡ್ಲರ್ ಗಳಿಗೆ ಪೂರೈಕೆ ಮಾಡಲು ಸಂಗ್ರಹಿಸಿದ್ದ ಮಾದಕ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಬಂಧಿತರಲ್ಲಿ ನಾಲ್ವರು ಮಹಿಳೆಯರು ಹಾಗೂ ಓರ್ವ ಆರ್ಗ್ಯಾನಿಕ್ ಕೆಮಿಸ್ಟ್ರಿ ವಿಭಾಗದ ಸ್ನಾತಕೋತ್ತರ ಪದವೀಧರ ಎನ್ನಲಾಗಿದೆ.