ತಿರುವನಂತಪುರಂ: ಕೇರಳದಲ್ಲಿ ಕೊರೋನಾದ ರಣಕೇಕೆ ಮುಂದುವರಿದಿದೆ. ಹೊಸದಾಗಿ 2885 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಇದು ಆತಂಕ ಸೃಷ್ಟಿಸಿದೆ. ಕೊರೋನಾದಿಂದ ಕೇರಳದಲ್ಲಿ ಶನಿವಾರ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೇರಳದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಇದೀಗ 425ಕ್ಕೆ ತಲುಪಿದೆ.
ಕಾಸರಗೋಡಿನಲ್ಲಿ ಕೂಡ ಕೊರೋನಾ ಹಾವಳಿ ತೀವ್ರವಾಗಿದೆ. ಕಾಸರಗೋಡಿನಲ್ಲಿ ಹೊಸದಾಗಿ 150 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಕೇರಳದಲ್ಲಿ 19 ಹಾಟ್ ಸ್ಪಾಟ್ ಗಳನ್ನು ಹೊಸದಾಗಿ ಗುರುತಿಸಲಾಗಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಕೊರೋನಾ ಸೋಂಕಿತ 1944 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.