ತಿರುವನಂತಪುರ: ಕೇರಳದಲ್ಲಿ 2019ರ ಸೆಪ್ಟೆಂಬರ್ ವರೆಗೆ 1,500ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.
ಈ ಅಚ್ಚರಿಯ ಅಂಶವನ್ನು ಕೇರಳ ಪೊಲೀಸ್ ಇಲಾಖೆಯ ದಾಖಲೆಗಳೇ ಬಹಿರಂಗಗೊಳಿಸಿವೆ.
ಈ ವರ್ಷ ಒಟ್ಟು 10,516 ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿವೆ. ಈ ಪೈಕಿ 1,537 ರೇಪ್ ಕೇಸ್ಗಳು. ಕಳೆದ ವರ್ಷದ ಇದೇ ಅವಧಿಯಲ್ಲಿ 2,015 ರೇಪ್ ಕೇಸ್ಗಳು ದಾಖಲಾಗಿದ್ದವು ಎಂದು ಪೊಲೀಸ್ ಕ್ರೈಮ್ ರೆಕಾರ್ಡ್ ಬ್ಯೂರೋ ವರದಿ ತಿಳಿಸಿದೆ. 2017ರಲ್ಲಿ 2003, 2016ರಲ್ಲಿ 1,656 ರೇಪ್ ಕೇಸ್ಗಳು ದಾಖಲಾಗಿದ್ದವು.
ಈ ವರ್ಷ ರೇಪ್ ಕೇಸ್ಗಳ ಹೊರತಾಗಿ, 3,351 ಪೀಡನೆ ಕೇಸ್, 167 ಅಪಹರಣ ಪ್ರಕರಣ, 309 ಈವ್ ಟೀಸಿಂಗ್ ಮತ್ತು ನಾಲ್ಕು ವರದಕ್ಷಿಣೆ ಸಾವು ಪ್ರಕರಣಗಳು, 2019 ಕೌಟುಂಬಿಕ ಪ್ರಕರಣಗಳು ದಾಖಲಾಗಿವೆ.
ಕೇರಳದಲ್ಲಿ 1500 ಕ್ಕೂ ಹೆಚ್ಚು ರೇಪ್ ಕೇಸ್ ದಾಖಲು!
Follow Us