newsics.com
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 18,346 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ದೇಶದ ವಿವಿಧ ಆಸ್ಪತ್ರೆಗಳಲ್ಲಿ 2,52,902 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು 209 ದಿನಗಳಲ್ಲಿ ವರದಿಯಾದ ಅತೀ ಕಡಿಮೆ ಪ್ರಕರಣವಾಗಿದೆ
ಕೊರೋನಾ ಸೋಂಕಿತರಾಗಿದ್ದ ಶೇಕಡ 97.93 ಮಂದಿ ಗುಣಮುಖರಾಗಿದ್ದಾರೆ.
ದೇಶದಲ್ಲಿ ಒಟ್ಟು ವರದಿಯಾಗಿರುವ 18 346 ಕೊರೋನಾ ಪ್ರಕರಣಗಳ ಪೈಕಿ ಕೇರಳದ ಪಾಲು 8850. ಕೇರಳದಲ್ಲಿ ಕೊರೋನಾದಿಂದ ಒಂದೇ ದಿನದಲ್ಲಿ 149 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.