newsics.com
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 18,732 ಪ್ರಕರಣಗಳು ದಾಖಲಾಗಿವೆ. ಇದು ಸುಮಾರು ಆರು ತಿಂಗಳಲ್ಲಿ ಪತ್ತೆಯಾದ ಅತಿ ಕಡಿಮೆ ಸೋಂಕಿತರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಈ ಅವಧಿಯಲ್ಲಿ 279 ಮಂದಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.
ಬ್ರಿಟನ್ನಲ್ಲಿ ಹೊಸ ಸೋಂಕು ಪತ್ತೆಯಾದ ಆತಂಕದ ನಡುವೆಯೇ ಭಾರತದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಈವರೆಗೆ 97,61,538 ಜನರು ಗುಣಮುಖರಾಗಿದ್ದಾರೆ ಎಂದು ತಿಳಿಸಲಾಗಿದೆ.
ದೇಶದಲ್ಲಿ 2,78,690 ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಐಸಿಎಂಆರ್ ಪ್ರಕಾರ, ಡಿ.26ರ ವರೆಗೆ ಒಟ್ಟು 16,81,02,657 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 9,43,368 ಮಾದರಿಗಳನ್ನು ಶನಿವಾರ ಒಂದೇ ದಿನ ಪರೀಕ್ಷಿಸಲಾಗಿದೆ.
ದೇಶದಲ್ಲಿ ಈವರೆಗೆ ಒಟ್ಟು 1,47,622 ಸಾವುಗಳು ವರದಿಯಾಗಿವೆ. ಇದರಲ್ಲಿ ಮಹಾರಾಷ್ಟ್ರ49,189, ಕರ್ನಾಟಕ 12,051, ತಮಿಳುನಾಡು 12,059, ದೆಹಲಿ 10,437, ಪಶ್ಚಿಮ ಬಂಗಾಳ 9569, ಉತ್ತರಪ್ರದೇಶ 8293, ಆಂಧ್ರಪ್ರದೇಶ 7092, ಪಂಜಾಬ್ 5281 ಮತ್ತು 4275 ಗುಜರಾತ್ 70ರಷ್ಟು ಸಾವು ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಮಾರ್ಚ್-ಮೇನಲ್ಲೇ ಕರ್ನಾಟಕ ಸೇರಿ ದೇಶವನ್ನು ರೂಪಾಂತರಿ ಕೊರೋನಾ ಕಾಡಿತ್ತು…
ಈ ಬಾರಿ ದೇಶಕ್ಕೂ ಹೊಸ ವರ್ಷದ ಶುಭಾಶಯ ಹೇಳೋಣ- ಮನ್ ಕಿ ಬಾತ್’ನಲ್ಲಿ ಮೋದಿ
ಕೊರೋನಾ ಕಾಲದಲ್ಲಿ ದೇಶದೆಲ್ಲೆಡೆ ಕಾಂಡೋಮ್’ಗೆ ಭಾರೀ ಬೇಡಿಕೆ!
ಕೇಂದ್ರ ವಿವಿ ಪದವಿ ತರಗತಿ ಪ್ರವೇಶಕ್ಕೆ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ
ಆಹಾರ ಕೊಡಲಾರದ ದುಸ್ಥಿತಿ; 8 ವರ್ಷದ ಮಗಳಿಗೆ ವಿಷವುಣಿಸಿದ ವೈದ್ಯೆ!
ಮಹಾರಾಷ್ಟ್ರದಲ್ಲಿ ಮತ್ತೆ ಕೊರೋನಾ ಅಬ್ಬರ; 2854 ಮಂದಿಗೆ ಸೋಂಕು, 60 ಬಲಿ