ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್ ಅಧಿವೇಶನ ಎರಡು ಹಂತದಲ್ಲಿ ನಡೆಯಲಿದೆ. ಜ.31ರಿಂದ ಫೆ.11ರವರೆಗೆ ಹಾಗೂ ಮಾ.2ರಿಂದ ಏಪ್ರಿಲ್ 3ರವರೆಗೆ ನಡೆಯಲಿದೆ.
ಈ ಮೊದಲೇ ನಿಗದಿಯಾಗಿರುವಂತೆ ಫೆ.1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020-21ರ ಬಜೆಟ್ ಮಂಡಿಸಲಿದ್ದಾರೆ.
ದೇಶದ ಆರ್ಥಿಕ ಸ್ಥಿತಿ ಕುಸಿತ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿವಾದದ ಮಧ್ಯೆ ಈ ಬಜೆಟ್ ಅಧಿವೇಶನ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇವೆರಡೂ ವಿಚಾರಗಳನ್ನಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರಕ್ಕೆ ಹೆಚ್ಚಿನ ಪ್ರಶ್ನೆ ಕೇಳಲು ಯೋಜನೆ ರೂಪಿಸಿಕೊಂಡಿವೆ. ಆರ್ಥಿಕತೆ ಹಾಗೂ ಪೌರತ್ವ ಕಾಯ್ದೆ ವಿಚಾರಗಳೇ ಅಧಿವೇಶನದಲ್ಲಿ ಅಧಿಕ ಚರ್ಚೆಗೆ ಒಳಪಡಲಿವೆ ಎನ್ನಲಾಗಿದೆ.