Wednesday, October 5, 2022

ರೈಲಿನ ಎಸಿ ಬೋಗಿಗಳ ಪ್ರಯಾಣ ದರ ಶೇ.20 ರಿಯಾಯಿತಿ; ಷರತ್ತುಗಳು ಅನ್ವಯ!

Follow Us

newsics.com
ಚೆನ್ನೈ: ಪ್ರಯಾಣಿಕರು ರಾಜಧಾನಿ, ಶತಾಬ್ದಿ, ದುರಂತೋನಂತಹ ಪ್ರಮುಖ ರೈಲುಗಳ ಟಿಕೆಟ್ ಮೂಲದರದಲ್ಲಿ ಶೇ.20ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ.
ಟಿಕೆಟ್ ಬುಕ್ಕಿಂಗ್ ವೇಳೆ ಶೇ.60ರಷ್ಟು ಆಸನಗಳು ಭರ್ತಿಯಾದಲ್ಲಿ ಮೂಲಬೆಲೆಯಲ್ಲಿ ಶೇ.20ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅದೇ ರೀತಿ ಶೇ.70ರಿಂದ 80ರಷ್ಟು ಆಸನಗಳು ಭರ್ತಿಯಾದಲ್ಲಿ ಶೇ.10ರಷ್ಟು ರಿಯಾಯಿತಿ ಪ್ರಯಾಣಿಕರಿಗೆ ಸಿಗಲಿದೆ. ಶೇ.80 ರಷ್ಟು ಆಸನಗಳು ಭರ್ತಿಯಾದರೆ ಯಾವುದೇ ಆಫರ್ ಇರುವುದಿಲ್ಲ.
ಮೂರನೇ ಹಂತದ ಎಸಿ ಮತ್ತು ಎಸಿ ಚೇರ್ ಬೋಗಿಗಳ ಟಿಕೆಟ್ ಬುಕ್ಕಿಂಗ್ ಗಾಗಿ ಮಾತ್ರ ದರದಲ್ಲಿ ರಿಯಾಯಿತಿ ಸಿಗಲಿದೆ. ಕಾಯ್ದಿರಿಸುವಿಕೆ ಶುಲ್ಕ, ಸೂಪರ್ ಪಾಸ್ಟ್ ಮತ್ತು ಜಿಎಸ್’ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ತಿಳಿಸಿದೆ.
ರೈಲುಗಳ ನಿಗದಿತ ನಿರ್ಗಮನಕ್ಕಿಂತ ನಾಲ್ಕು ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಎಲ್ಲ ಪ್ರಯಾಣಿಕರಿಗೆ ರಿಯಾಯಿತಿ ನೀಡಲಾಗುತ್ತಿದೆ. ಪ್ರಯಾಣದ ದಿನದಂದು ಟಿಕೆಟ್‌ಗಳನ್ನು ಕಾಯ್ದಿರಿಸಿದರೆ ಶುಲ್ಕದಲ್ಲಿ ಯಾವುದೇ ಕಡಿತ ನೀಡಲಾಗುವುದಿಲ್ಲ ಎಂದು ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.
ದಕ್ಷಿಣ ರೈಲುಗಳಲ್ಲಿ ನವೆಂಬರ್ 15 ರಿಂದ ಡಿಸೆಂಬರ್ 31ರ ನಡುವೆ ಅಥವಾ ರೈಲು ಸೇವೆಗಳ ನಿಗದಿತ ವೇಳಾಪಟ್ಟಿ ಪರಿಚಯಿಸುವವರೆಗೂ ಪ್ರಯಾಣಿಕರಿಗೆ ರಿಯಾಯಿತಿ ಸಿಗಲಿದೆ. ಐಆರ್’ಸಿಟಿಸಿ ಪೋರ್ಟಲ್ ಮತ್ತು ಟಿಕೆಟ್ ಕೌಂಟರ್ ಗಳಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವ ಪ್ರಯಾಣಿಕರು ಈ ಯೋಜನೆಯಡಿ ರಿಯಾಯಿತಿ ಪಡೆಯಲು ಯಾವುದೇ ಆಯ್ಕೆಯನ್ನು ಆರಿಸಬೇಕಾಗಿಲ್ಲ.

ಚಾಲಕನ ಸಮಯಪ್ರಜ್ಞೆ; ಪ್ರಪಾತಕ್ಕೆ ಬೀಳಬೇಕಿದ್ದ ಬಸ್ ಬಚಾವ್!

ಮನಿ ಲ್ಯಾಂಡರಿಂಗ್ ಪ್ರಕರಣ; ದೀಪಕ್ ಕೊಚ್ಚಾರ್ ಜಾಮೀನು ಅರ್ಜಿ ತಿರಸ್ಕೃತ

ಮತ್ತಷ್ಟು ಸುದ್ದಿಗಳು

vertical

Latest News

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು....

ದೇಶದ ಶೇ.90ಕ್ಕಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ವಿಫಲ: ಬಿಲಿಯನೇರ್ ಆನಂದ್ ಮಹೀಂದ್ರ

newsics.com ನವದೆಹಲಿ: ದೇಶದ ಶೇ.90ರಷ್ಟು ಸ್ಟಾರ್ಟ್‌ಅಪ್‌ಗಳು ವಿಫಲವಾಗಿವೆ ಎಂದು ಬಿಲಿಯನೇರ್ ಆನಂದ್ ಮಹೀಂದ್ರ ಹೇಳಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ, ಎಲ್ಲಾ ಸ್ಟಾರ್ಟ್‌ಅಪ್‌ಗಳಲ್ಲಿ 90% ಕ್ಕಿಂತ ಹೆಚ್ಚು ವಿಫಲವಾಗಿವೆ. ಒಂದು-ಆಫ್ ಸನ್ನಿವೇಶಗಳಿಂದಾಗಿ...

ಭೀಕರ ಅಪಘಾತ- 10 ಮಂದಿ ಸಾವು, 7 ಮಂದಿಗೆ ಗಾಯ

newsics.com ವಡೋದರ: ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಗುಜರಾತ್‌ನ ವಡೋದರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ತ್ರಿಚಕ್ರ ವಾಹನವೊಂದಕ್ಕೆ ಕಂಟೈನರ್‌ ಟ್ರಕ್‌ ಡಿಕ್ಕಿ ಹೊಡೆದಿದೆ....
- Advertisement -
error: Content is protected !!